ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಳ್ಳತನದ ಆರೋಪ ವಿದ್ಯಾರ್ಥಿನಿ ಆತ್ಮಹತ್ಯೆ

11:25 PM Mar 17, 2024 IST | Samyukta Karnataka

ಬಾಗಲಕೋಟೆ: ಕಳ್ಳತನ ಆರೋಪದಿಂದ ಮನನೊಂದು ೮ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ.
ದಿವ್ಯಾ ಶಿವಪ್ಪ ಬಾರಕೇರ(೧೩) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಪ್ರಕರಣದ ಸಂಬಂಧ ಬಾಲಕಿ ತಂದೆ ಶಿವಪ್ಪ ಬಾರಕೇರ ಅವರು ಹಳೆ ಕದಾಂಪುರ ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕಿ ಜಯಶ್ರೀ ಮಿಶ್ರಕೋಟಿ ಹಾಗೂ ಮುಖ್ಯಗುರು ಕೆ.ಎಚ್.ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕಿ ಜಯಶ್ರೀ ಮಿಶ್ರಕೋಟಿ ಅವರ ಪರ್ಸನಲ್ಲಿದ್ದ ೨ ಸಾವಿರ ರೂ.ಗಳನ್ನು ದಿವ್ಯಾ ಕಳ್ಳತನ ಮಾಡಿದ್ದಾಳೆ ಎಂದು ಸಂಶಯಪಟ್ಟು ನಿಜ ಹೇಳದಿದ್ದರೆ ಟಿಸಿ ಕಿತ್ತು ಮನೆಗೆ ಕಳುಹಿಸುವುದಾಗಿ ಅವಮಾನಿಸಿದ್ದರು. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿ ತಂದೆ ಶಿವಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.
ಬಾಲಕಿಯ ಸಹೋದರಿ ದೀಪಾ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ ನಂತರ ಠಾಣೆಗೆ ಬಂದು ದೂರು ದಾಖಲಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಲ್ಲಿ ಮಗಳನ್ನು ವಿವಸ್ತçಗೊಳಿಸಿ ಹಣ ಆಕೆಯ ಬಳಿ ಇದೆಯೇ ಎಂದು ಅವಮಾನಕರ ರೀತಿಯಲ್ಲಿ ಶಿಕ್ಷಕರು ಪರಿಶೀಲಿಸಿದ್ದರು ಎಂದು ಕುಟುಂಬಸ್ಥರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಪಂಪನಗೌಡ ಹಾಗೂ ಪಿಎಸ್‌ಐ ಸಂತೋಷ ದಳವಾಯಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Next Article