ಕಾಂಕ್ರೀಟ್ ಲಾರಿ ಹಾಯ್ದು ಹೆಡ್ ಕಾನಸ್ಟೇಬಲ್ ಸಾವು
ಗದಗ : ಗಣೇಶೋತ್ಸವಕ್ಕೆ ಪೂಜಾ ಸಾಮಗ್ರಿ ಖರೀದಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಹೆಡ್ ಕಾನಸ್ಟೇಬಲ್ ಮೇಲೆ ಕಾಂಕ್ರಿಟ್ ಲಾರಿ ಹರಿದ ಪರಿಣಾಮವಾಗಿ ಹೆಡ್ ಕಾನಸ್ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗನ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೆಡ್ ಕಾನಸ್ಟೇಬಲ್‌ನನ್ನು ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ ಕಾನ್ಟೆಬಲ್ ರಮೇಶ್ ಡಂಬಳ (೪೫) ಎಂದು ಗುರುತಿಸಲಾಗಿದೆ.
ಗಣೇಶೋತ್ಸವಕ್ಕೆ ಮಾರ್ಕೆಟ್ ನಿಂದ ಹಣ್ಣು, ತಕರಾರಿ, ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ತೆರಳುವಾಗ ಈ ಅಪಘಾತ ನಡೆದಿದೆ. ಗದಗ ಮಾರುಕಟ್ಟೆಯಿಂದ ಕಾಂಕ್ರೀಟ್ ಲಾರಿಯು ಎಪಿಎಂಸಿ ಟ್ಗೆ ತೆರಳುತ್ತಿತ್ತು. ಮಾರ್ಕೆಟ್ ನಿಂದ ಪೊಲೀಸ್ ಕ್ವಾಟರ್ಸ್ ಬಳಿ ಹೊರಟಿದ್ದನೆನ್ನಲಾಗಿದೆ.
ಪೊಲೀಸ್ ಹೆಡ್‌ಕಾನಸ್ಟೇಬಲ್ ಕಾಂಕ್ರೀಟ್ ಲಾರಿಯನ್ನು ಓವರ ಟೇಕ್ ಮಾಡಲು ಪ್ರಯತ್ನಿಸಿದಾಗ ಈ ದುರ್ಘಟನೆ ನಡೆದಿದೆ. ಲಾರಿ ಗಾಲಿ ತಲೆಯ ಮೇಲೆ ಹರಿದಿದ್ದರಿಂದ ಹೆಡ್ ಕಾನಸ್ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ಮೂಲಗಳು ತಿಳಿಸಿವೆ. ಗದಗ ಸಾರಿಗೆ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.