ಕಾಂಗ್ರೆಸ್‌ನವರಿಗೆ ಕೇಸರಿ ಕಂಡ್ರೆ ಆಗಲ್ಲ
ಬಾಗಲಕೋಟೆ : ಕಾಂಗ್ರೆಸ್‌ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಹಿಂದೂ, ಹಿಂದುತ್ವ ಕಂಡ್ರೆ ಆಗಲ್ಲ. ಇಡೀ ದೇಶದಲ್ಲಿ ಶ್ರೀ ರಾಮನ ಅಲೆಯಲ್ಲ, ಸುನಾಮಿಯೇ ಎದ್ದಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಎರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಕೆರಗೋಡ್‌ನಲ್ಲಿ, ಕೇಸರಿ ಬಣ್ಣದ ಹನುಮನ ಚಿತ್ರವಿರುವ ಧ್ವಜವನ್ನ ತೆಗೆದು ಹಾಕಿದ್ದಾರೆ. ಯಾರೂ ಕಂಪ್ಲೇಟ್ ಕೊಡದೇ, ಯಾವುದೇ ವಿವಾದ ಇಲ್ಲದೇ ಈಗ ಅದನ್ನ ಸಡನ್ ಆಗಿ ತೆಗೆಯುವ ಕಾರಣ ಏನು 108 ಅಡಿಯ ಧ್ವಜದ ಕಂಬ ಇದೆ, ಇದನ್ನ ನೋಡಿದ್ರೆ ಅಲ್ಲಿರುವ ನಾಗರಿಕರ, ಯುವಕರ ಉತ್ಸಾಹವನ್ನ ಮೆಚ್ಚಬೇಕು. ಶ್ರೀರಾಮನ ಮೇಲಿರುವ ಕಳಕಳಿ ಇಂದ ಜನವರಿ 22ರಂದು ಆ ಕಂಬವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಜನವರಿ 26 ರಂದು, ಹನುಮ ಧ್ವಜ ಇಳಿಸಿ ಆ ಕಂಬದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಮಾರನೇಯ ದಿನ ಹನುಮ ಧ್ವಜ ಹಾಕಿದ್ದಾರೆ. ಈ ಕಾಂಗ್ರೆಸ್‌ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಹಿಂದೂ, ಹಿಂದುತ್ವ ಕಂಡ್ರೆ ಆಗಲ್ಲ. ಇಡೀ ದೇಶದಲ್ಲಿ ಶ್ರೀ ರಾಮನ ಅಲೆಯಲ್ಲ, ಸುನಾಮಿಯೇ ಎದ್ದಿದೆ. ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಆ ವೈಭವ ನೋಡಲಾಗದೇ ಹೊಟ್ಟೆ ಉರಿತಾಯಿದೆ ಇವ್ರಿಗೆ. ಕೇಸರಿ ಯಾವುದೋ ವ್ಯಕ್ತಿ, ಧರ್ಮ ಪಕ್ಷದ್ದೋ ಅಲ್ಲ, ಹಿಂದೂಸ್ತಾನ್‌ದಲ್ಲಿ ಕೇಸರಿ ಧ್ವಜವೇ ಹಾರಾಡುತ್ತೆ. ಅದೇ ಸ್ಥಳದಲ್ಲಿ ಮತ್ತೆ ಹನುಮಧ್ವಜ ಪ್ರತಿಷ್ಠಾಪನೆ ಆಗಬೇಕು ಎಂದು ಮುತಾಲಿಕ್ ತಿಳಿಸಿದರು.