ಕಾಂಗ್ರೆಸ್‌ನ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ
ಗದಗ: ಕಾಂಗ್ರೆಸ್‌ನ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಆದರೆ, ಆಂತರಿಕವಾಗಿ ಕಾಂಗ್ರೆಸ್‌ನಲ್ಲಿ ವೈರುದ್ಧ ಇರುವುದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ವಿಷಯವಾಗಿ ಅವರ ಅಭಿಪ್ರಾಯ ಹೇಳುತ್ತಾರೆ. ಆದರೆ, ರಾಜಕಾರಣಕ್ಕೆ ವಿಧಿವಿಧಾನಗಳಿವೆ. ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ. ಆದರೆ, ಯಾರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಮೂರು ನಾಲ್ಕು ಡಿಸಿಎಂಗಳನ್ನು ಮಾಡಬೇಕಾ ಅನ್ನುವುದು ಕಾಂಗ್ರೆಸ್‌ಗೆ ಬಿಟ್ಟಿದ್ದು. ಎಷ್ಟು ಜನರಿಗೆ ಡಿಸಿಎಂ ಮಾಡ್ತಾರೆ ಕಾದು ನೋಡೋಣ. ಅವರ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಡಿಸಿಎಂ ವಿಚಾರವಾಗಿ ಹೊಸ ವ್ಯಾಖ್ಯಾನ ಮಾಡುವುದು ಕಾಂಗ್ರೆಸ್‌ನಲ್ಲಿ ನಡೆದಿದೆ. ಅಸಲಿ ರಾಜಕಾರಣ ಬೇರೆನೇ ಇದೆ. ಕಾದು ನೋಡೋಣ ಎಂದರು.
ಪಠ್ಯಪುಸ್ತಕದಲ್ಲಿ ವೀರಶೈವ ಪದ ತೆಗೆದು ಹಾಕಿರುವ ಬಗ್ಗೆ ನೋಡಿಲ್ಲ. ೯ನೇ ತರಗತಿ ಪಠ್ಯದಲ್ಲಿ ತೆಗೆದಿದ್ದಾರೆ ಅಂತ ಹೇಳುತ್ತಿದ್ದಾರೆ ನಾನು ಗಮನಿಸಿಲ್ಲ. ಹಾಗೇನಾದರೂ ಆಗಿದ್ದರೆ, ಸರಿಪಡಿಸಿ ಅಂತಾ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು. ಶಿಗ್ಗಾವಿ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಬರುತ್ತಾರೆ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ನಾನೂ ಅವರ ಬಳಿ ಚರ್ಚೆ ಮಾಡಿಲ್ಲ. ಅವರೂ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದರು.