ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಇಂಥ ರಾಕ್ಷಸರ ಸಮರ್ಥನೆ ಹೊಸದಲ್ಲ

06:18 PM Oct 12, 2023 IST | Samyukta Karnataka

ದಾವಣಗೆರೆ: ಮೈಸೂರಿನಲ್ಲಿ ಮಹಿಷ ದಸರಾ ಆಯೋಜನೆಗೆ ಮುಂದಾಗಿರುವ ಸಂಘಟಕರ ವರ್ತನೆಯನ್ನು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಕ್ಷಸರ ಸಮರ್ಥನೆ ಮಾಡುವುದೇನೂ ವಿಶೇಷವಲ್ಲ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಗುರುವಾರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲ್ಲೆಲ್ಲಾ ರಾಕ್ಷಕರನ್ನು ಸಮರ್ಥಿಸಿಕೊಂಡೇ ಬರುತ್ತಿದೆ. ಇದೊಂದೇ ಅಲ್ಲ, ಅತ್ತ ಪ್ಯಾಲಿಸ್ತೀನ್‌ರನ್ನು ಕಾಂಗ್ರೆಸ್ ಪಕ್ಷವು ಸಮರ್ಥಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕಂತೂ ಇದೇನೂ ಹೊಸದೂ ಅಲ್ಲ ಎಂದು ಅವರು ಹೇಳಿದರು.
ಮಹಿಷ ದಸರಾ ಸಮರ್ಥನೆ ಮಾಡುವ ಹೊತ್ತಿನಲ್ಲೇ ಪ್ಯಾಲೇಸ್ತೀನ್‌ಗೂ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಗೊತ್ತಾಗಿದೆ. ಪ್ಯಾಲೇಸ್ತೀನ್‌ನ ರಾಕ್ಷಸಿ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದ ಐಎನ್‌ಡಿಐಎ(ಇಂಡಿಯಾ) ಕೂಟವು ಸಮರ್ಥಿಸಿಕೊಂಡಿದೆ ಎಂದು ಅವರು ಟೀಕಿಸಿದರು.
ರಾಕ್ಷಸಿ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವುದೇನೂ ಕಾಂಗ್ರೆಸ್ಸಿಗೆ ದೊಡ್ಡ ವಿಷಯವೂ ಅಲ್ಲ. ಮಹಿಷ ದಸರಾಗೆ ಇಡೀ ಮೈಸೂರಿನ ಜನರು ಒಗ್ಗಟ್ಟಾಗಿ ಪ್ರತಿಭಟಿಸುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ. ಮಹಿಷ ದಸರ ಆಯೋಜಕರಿಗೆ ಮೈಸೂರಿನ ಜನತೆಯಿಂದಲೂ ತೀವ್ರ ವಿರೋದ ವ್ಯಕ್ತವಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Next Article