ಕಾಂಗ್ರೆಸ್ 'ನ್ಯಾಯ ಪತ್ರ' ಬಿಡುಗಡೆ
11:57 AM Apr 05, 2024 IST | Samyukta Karnataka
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರು ಭಾಗವಹಿಸಿದ್ದು, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ 'ನ್ಯಾಯ ಪತ್ರ'ವನ್ನು ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನು 'ಪಂಚ ನ್ಯಾಯ್, ಐದು 'ನ್ಯಾಯ ಸ್ತಂಭಗಳು' ಮೇಲೆ ಕೇಂದ್ರೀಕರಿಸುವ ಮಾರ್ಗದಲ್ಲಿ ಚಿತ್ರಿಸಲಾಗಿದೆ. ಇದು 'ಯುವ ನ್ಯಾಯ', 'ನಾರಿ ನ್ಯಾಯ', 'ಕಿಸಾನ್ ನ್ಯಾಯ', 'ಶ್ರಮಿಕ್ ನ್ಯಾಯ' ಮತ್ತು 'ಹಿಸ್ಸೆದಾರಿ ನ್ಯಾಯ' ಮತ್ತು ಸಾರ್ವತ್ರಿಕ ಚುನಾವಣೆಗಳಿಗೆ ತನ್ನ ಚುನಾವಣಾ ಭರವಸೆಗಳ ಭಾಗವಾಗಿ ಜನರಿಗೆ ನೀಡಿದ ಭರವಸೆಗಳನ್ನು ಒತ್ತಿಹೇಳುತ್ತದೆ.