ಕಾಂಗ್ರೆಸ್ ಪಕ್ಷ, ಸರ್ಕಾರದ ಹಣ, ಅಧಿಕಾರ ಪ್ರಭಾವ 9 ಸುತ್ತು ಎಣಿಕೆಯಲ್ಲಿ ಬಹಿರಂಗ
10:52 AM Nov 23, 2024 IST | Samyukta Karnataka
ಹುಬ್ಬಳ್ಳಿ :ಶಿಗ್ಗಾವಿ- ಸವಣೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಅಧಿಕಾರ ಮತ್ತು ಹಣದ ಪ್ರಭಾವ ಎಷ್ಟು ಬೀರಿದೆ ಎಂಬುದು 9 ಸುತ್ತುಗಳ ಮತ ಎಣಿಕೆಯಲ್ಲಿ ಬಹಿರಂಗವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
18 ಸುತ್ತುಗಳಲ್ಲಿ 8 ಸುತ್ತು ಮತ ಎಣಿಕೆ ಪೂರ್ಣಗೊಂಡ ಬಳಿಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಣಿಕೆ ಮುಗಿದ 8 ಸುತ್ತೂಗಳಲ್ಲೂ ಕಾಂಗ್ರೆಸ್ ನವರು ತೀವ್ರ ಪೈಪೋಟಿ ನೀಡಿದ್ದಾರೆ. ಇದಕ್ಕೆ ಹಣ ಮತ್ತು ಸರ್ಕಾಧ ಅಧಿಕಾರದ ಬಲವೇ ಕಾರಣ ಎಂದು ನೇರ ಆರೋಪ ಮಾಡಿದರು.
ಇನ್ನೂ 10 ಸುತ್ತು ಇದೆ. ಆ ಸುತ್ತುಗಳಲ್ಲಿ ಭರತ್ ಬೊಮ್ಮಾಯಿ ಅವರು ಹೆಚ್ಚಿನ ಮುನ್ನಡೆ ಸಾಧಿಸುವ ಭರವಸೆ ಇದೆ ಎಂದು ಹೇಳಿದರು.