ಕಾಂಗ್ರೆಸ್ ಷಂಡ ಸರ್ಕಾರ: ಜಗದೀಶ ಶೆಟ್ಟರ
ಭಾಷಣ ಚೆನ್ನಾಗಿ ಮಾಡುತ್ತಾರೆ. ಆದರೆ, ನೋಂದಣಿ ಯಾಕೆ ಕಡಿಮೆ ಆಗಿದೆ
ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಿಂದ ಏನೂ ಆಗುವುದಿಲ್ಲ. ಇದೊಂದು ಷಂಡ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಧಿಕಾರವನ್ನು ಎಂಜಾಯ್ ಮಾಡಿದ್ದಾರೆ. ಐದು ವರ್ಷ ಹೇಗೆ ಅಧಿಕಾರ ಪೂರ್ಣಗೊಳಿಸಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಇಳಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಗೃಹಮಂತ್ರಿಗಳು ಅವರದ್ದೇ ಆದ ಹೇಳಿಕೆ ನೀಡುತ್ತ ಹೊರಟಿದ್ದಾರೆ. ಈ ಎಲ್ಲಾ ಆಂತರಿಕ ಗೊಂದಲದಲ್ಲಿ ಕಾಂಗ್ರೆಸ್ ಇದೆ. ಇದರ ಜೊತೆಗೆ ಸಿಎಂ ವಿರುದ್ಧ ಇರುವ ಮುಡಾ, ವಾಲ್ಮೀಕಿ ನಿಗಮದ ಹಗರಣ ಮರೆಮಾಚುವುದರಲ್ಲೇ ದಿನ ಕಳೆಯುತ್ತಿದ್ದಾರೆ. ಹೀಗಾಗಿ ಜನಪರ ಕೆಲಸ ಮಾಡದ ಕಾಂಗ್ರೆಸ್, ಷಂಡ ಸರ್ಕಾರ. ಇದೊಂದು ಅಸಂವಿಧಾನಿಕ ಪದ ಎಂದು ನನ್ನ ಮೇಲೆ ಕೇಸ್ ಹಾಕಿದರೂ ಪರವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಂತೂ ಸತ್ಯ ಎಂದರು.
ಸ್ವತಃ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಕೆಲಸ ಆಗುತ್ತಿಲ್ಲ, ಅನುದಾನ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ರಾಜ್ಯದ ಸಬ್ ರಿಜಿಸ್ಟಾçರ್ ಕಚೇರಿಗಳಲ್ಲಿ ನೋಂದಣಿಯೂ ಆಗುತ್ತಿಲ್ಲ. ಲಕ್ಷö್ಯ ವಹಿಸಿ ಕೆಲಸ ಮಾಡುವವರು ಯಾರೂ ಇಲ್ಲ. ಇ ಸ್ವತ್ತು, ರೆಕಾರ್ಡ್ ಆಗಿದ್ದರೆ ಮಾತ್ರ ಕೆಲಸ ಮುಂದುವರಿಯುತ್ತದೆ. ಇದು ಬಹಳ ನಿಧಾನವಾಗಿದೆ. ಕಂದಾಯ ಸಚಿವರು ಕೃಷ್ಣಬೈರೇಗೌಡರು ಭಾಷಣ ಚೆನ್ನಾಗಿ ಮಾಡುತ್ತಾರೆ. ಆದರೆ, ನೋಂದಣಿ ಯಾಕೆ ಕಡಿಮೆ ಆಗಿದೆ ಎಂಬುದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದರು.