For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್ ಸರ್ಕಾರದ 60 ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತ ತನಿಖೆಗೆ

12:44 AM Apr 30, 2023 IST | Samyukta Karnataka
ಕಾಂಗ್ರೆಸ್ ಸರ್ಕಾರದ 60 ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತ ತನಿಖೆಗೆ

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 60 ಭ್ರಷ್ಟಾಚಾರ ಪ್ರಕರಣ ನಡೆದಿವೆ. ಅವುಗಳನ್ನು ಮುಚ್ಚಿಹಾಕಲು 2016 ರಲ್ಲಿ ಎಸಿಬಿ ರಚನೆ ಮಾಡಲಾಗಿತ್ತು. ಈಗ ಅವುಗಳೆಲ್ಲದರ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಡರಾತ್ರಿ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಎಸಿಬಿ ರಚನೆ ಮಾಡಲಾಗಿತ್ತು. ಇದು ನಾನು ಹೇಳುವುದಲ್ ಹೈಕೋರ್ಟ್ ನ್ಯಾಯಾಧೀಶರೇ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿ ಮುಚ್ಚಿ ಹಾಕುವ ಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು. ಅದೆಲ್ಲದರ ಬಗ್ಗೆಯೂ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಕೊಡಲಾಗಿದೆ ಎಂದರು.
ನಮ್ಮ ಸರ್ಕಾರದ ಮೇಲೆ ಕಾಂಗ್ರೆಸ್ ನವರು ನಿರಾಧಾರ ಆರೋಪ ಮಾಡುತ್ತಿದ್ದಾರೆ. ಒಂದೇ ಒಂದು ಪ್ರಕರಣ ತೋರಿಸಲಿ ಎಂದು ಸಿಎಂ ಸವಾಲು ಹಾಕಿದರು.

ಲೋಕಾಯುಕ್ತ ಮುಚ್ಚಿದ ಕುಖ್ಯಾತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಯಾರೂ ಲೋಕಾಯುಕ್ತ ದುರ್ಬಲಗೊಳಿಸುವ ಮತ್ತು ಮುಚ್ಚುವ ಪ್ರಯತ್ನ ಮಾಡಿರಲಿಲ್ಲ. ಸಿದ್ಧರಾಮಯ್ಯ ಈ ಕೆಲಸ ಮಾಡಿ ಕುಖ್ಯಾತರಾಗಿದ್ದಾರೆ. ಕಾಂಗ್ರೆಸ್ ನ 60 ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೆಲ ಪ್ರಕರಣ ಇವೆ ಎಂದಯ ಹೇಳಿದರು.
ಡಾ.ಜಿ.ಪರಮೇಶ್ವರ ಮೇಲೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕು.ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು ಎಂದು ಸಿಎಂ ತಿಳಿಸಿದರು.

50 ಗ್ಯಾರಂಟಿ ಘೋಷಿಸಿದ್ರೂ ಏನೂ ಆಗಲ್ಲ : ಕಾಂಗ್ರೆಸ್ ಪಕ್ಷದವರು ಐದು ಗ್ಯಾರಂಟಿ ಅಲ್ಲ 50 ಗ್ಯಾರಂಟಿ ಯೋಜನೆ ಘೋಷಣೆ ಮಾಡಿಕೊಳ್ಳಲಿ. ಏನೂ ಆಗಲ್ಲ. ಕಾಂಗ್ರೆಸ್ ನವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಮೇ 10 ರವರೆಗೆ ಮಾತ್ರ ಗ್ಯಾರಂಟಿ ಅಷ್ಟೇ ಎಂದು ಮುಖ್ಯಮಂತ್ರಿ ಹೇಳಿದರು.