ಕಾಂಗ್ರೆಸ್ ಸೈನ್ಯಕ್ಕೆ ಬಿಟಿಪಿಎಸ್ ರಹದಾರಿ
ಬಳ್ಳಾರಿ: ಬಳ್ಳಾರಿಯ ಕುಡತಿನಿ ಥರ್ಮಲ್ ಪ್ಲಾಂಟ್ ಒಳಗೆ ಭದ್ರತಾ ದೃಷ್ಠಿಯಿಂದ ಯಾವುದೇ ವಾಹನಗಳ ಪ್ರವೇಶಕ್ಕೆ ಅನುಮತಿ ಇಲ್ಲ ಆದರೆ ಚುನಾವಣೆ ಪ್ರಚಾರಕ್ಕೆ ಬಂದ ನೂರಾರು ವಾಹನಗಳನ್ನು ಥರ್ಮಲ್ ಪ್ಲಾಂಟ್ ನಿಂದ ತೋರಣಗಲ್ ರಸ್ತೆಗೆ ಸಂಪರ್ಕಿಸಲು ಬಿಟಿಪಿಎಸ್ ಅಧಿಕಾರಿಗಳು ರಹದಾರಿ ಮಾಡಿಕೊಟ್ಟರು.
ಸಂಡೂರು ವಿಧಾನಸಭೆ ಕ್ಷೇತ್ರದ ದರೋಜಿಯಲ್ಲಿ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್ ಸೇರಿ ಹಲವು ನಾಯಕರು ತೋರಣಗಲ್ ನಲ್ಲಿ ಆಯೋಜನೆ ಮಾಡಿರುವ ಬಹಿರಂಗ ಸಮಾವೇಶಕ್ಕೆ ತೆರಳಬೇಕಿತ್ತು. ದರೋಜಿ ಕುಡತಿನಿ ಮಾರ್ಗವಾಗಿ ತೋರಣಗಲ್ ಗೆ ಹೋಗಬೇಕಿತ್ತು. ಆದರೆ ದರೋಜಿಯಿಂದ ನೆರವಾಗಿ ಬಿಟಿಪಿಎಸ್ ನಿರ್ಬಂಧಿತ ಪ್ರದೇಶದ ಮೂಲಕ ವಾಹನಗಳನ್ನು ಒಳಬಿಡಲಾಯಿತು. ಸ್ವತಃ ಸಂಸದ ತುಕಾರಂ ಗೇಟು ತೆಗೆಸಿ ೧೦೦ ಕ್ಕೂ ಹೆಚ್ಚು ವಾಹನಗಳನ್ನು ಒಳಬಿಟ್ಟರು. ಸಿಪಿಐ ವಿಶ್ವನಾಥ ಹಿರೇಗೌಡರ್ ಸೇರಿ ಹಲವು ಪೊಲೀಸರು ಇದಕ್ಕೆ ಸಾಥ್ ನೀಡಿದರು. ಸುಮಾರು ೧೦ ಕಿ.ಮೀಗೂ ಅಧಿಕ ಪ್ರಯಾಣ ಉಳಿಸುವ ಅಲುವಾಗಿ ಬಿಟಿಪಿಎಸ್ ಮೂಲಕ ಎಂಟ್ರಿಯಾಗಿ ಜಿಂದಾಲ್ ರಸ್ತೆಗೆ ಎಂಟ್ರಿ ಕೊಟ್ಟರು. ಹೀಗೆ ಅಂಧಾ ದರ್ಬಾರ್ ಆಗಿ ನಡೆದ ಆಡಳಿಯ ಯಂತ್ರಾಂಗ ದುರ್ಬಳಕೆ ಟೀಕೆಗೆ ಗುರಿಯಾಯಿತು.