ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ?
ಬೆಂಗಳೂರು: ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ? ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು 🔶ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು
🔶ಆರ್ಟಿಕಲ್ 28 ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30 ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು
🔶HRCE Act 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡರು
🔶 ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು; ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ, ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಯಿತು
🔶 ಸ್ಪೆಷಲ್ ಮ್ಯಾರೇಜ್ ಆಕ್ಟ್ ಅನ್ನು 1951 ರಲ್ಲಿ ಪರಿಚಯಿಸುವ ಮೂಲಕ ಮುಸಲ್ಮಾನ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು
🔶 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು, ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ದಬ್ಬಿದ್ದು ಇದೆ ಕಾಂಗ್ರೆಸ್ ಪಕ್ಷ
🔶 ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು
🔶 ವಕ್ಗ್ ಆಕ್ಟ್ ಮೂಲಕ ಯಾವುದೇ ಭೂಮಿಯನ್ನು ಮುಸಲ್ಮಾನರು ತೆಗೆದುಕೊಳ್ಳುವ ಹಕ್ಕನ್ನು ಪಡೆದರು
🔶 2009 ರಲ್ಲಿ ಕೇಸರಿ ಭಯೋತ್ಪಾದನೆ (Saffron Terrorism) ಎಂಬ ಪದಪುಂಜವನ್ನು ಪರಿಚಯಿಸಿದರು ಎಂದು ಬರೆದುಕೊಂಡಿದ್ದಾರೆ.