For the best experience, open
https://m.samyuktakarnataka.in
on your mobile browser.

ಕಾಡಾನೆ ತುಳಿತಕ್ಕೆ ಕೇರಳದ ವ್ಯಕ್ತಿ ಸಾವು ಪ್ರಕರಣ: ರಾಜ್ಯ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬ

05:35 PM Mar 10, 2024 IST | Samyukta Karnataka
ಕಾಡಾನೆ ತುಳಿತಕ್ಕೆ ಕೇರಳದ ವ್ಯಕ್ತಿ ಸಾವು ಪ್ರಕರಣ  ರಾಜ್ಯ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬ

ಚಾಮರಾಜನಗರ: ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಕೇರಳದ ಸಂತ್ರಸ್ತ ಕುಟುಂಬ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಾನವೀಯತೆ ದೃಷ್ಟಿಯಿಂದ ಪರಿಹಾರ ಘೋಷಣೆ ಮಾಡಿದ್ದೆವು. ಆದರೆ ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದಕ್ಕೆ ನಮಗೆ ಪರಿಹಾರ ಬೇಕಿಲ್ಲ ಎಂದು ಸಂತ್ರಸ್ತ ಕುಟುಂಬ ತಿರಸ್ಕರಿಸಿದೆ ಎಂದಿದ್ದಾರೆ.