For the best experience, open
https://m.samyuktakarnataka.in
on your mobile browser.

ಕಾಡಿನಲ್ಲಿ ಮಂಗಗಳ ಶವ ಪತ್ತೆ

09:24 PM Dec 14, 2023 IST | Samyukta Karnataka
ಕಾಡಿನಲ್ಲಿ ಮಂಗಗಳ ಶವ ಪತ್ತೆ

ಸುಬ್ರಹ್ಮಣ್ಯ: ಬಳ್ಪ ರಕ್ಷಿತಾರಣ್ಯದ ಮೂಲಕ ಹಾದು ಹೋಗುವ ಗುತ್ತಿಗಾರು-ಬಳ್ಪ ರಸ್ತೆ ನಡುವೆ ರಸ್ತೆ ಬದಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ರಾಶಿ ರಾಶಿ ಮೃತದೇಹಗಳು ಇದ್ದು ಸುಮಾರು 30ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿದೆ.
ಗುರುವಾರ ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿದ್ದಾರೆ. ಎಲ್ಲೋ ಮಂಗಗಳನ್ನು ಕೊಂದು ಕಾಡೊಳಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಇದೀಗ ಮಂಗಗಳ ಶವವನ್ನು ಯೇನೆಕಲ್ಲು ನರ್ಸರಿಗೆ ಸಾಗಾಟ ಮಾಡಿದ್ದು, ಶುಕ್ರವಾರ ಶವಗಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕವೇ ಮಂಗಗಳ ಸಾವಿಗೆ ಕಾರಣ ತಿಳಿದು ಬರಲಿದೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ.