For the best experience, open
https://m.samyuktakarnataka.in
on your mobile browser.

ಕಾಮಗಾರಿ ಹಿನ್ನೆಲೆ: ರೈಲುಗಳ ಸೇವೆಯಲ್ಲಿ ಬದಲಾವಣೆ

07:14 PM Jul 12, 2024 IST | Samyukta Karnataka
ಕಾಮಗಾರಿ ಹಿನ್ನೆಲೆ  ರೈಲುಗಳ ಸೇವೆಯಲ್ಲಿ ಬದಲಾವಣೆ

ಹುಬ್ಬಳ್ಳಿ : ನಿಟ್ಟೂರು ಮತ್ತು ಸಂಪಿಗೆ ರೋಡ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ 62ರಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:

ರೈಲುಗಳ ಸಂಚಾರ ರದ್ದು: ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳನ್ನು ಜುಲೈ 18 & 25 ರಂದು ರದ್ದು ಪಡಿಸಲಾಗುತ್ತಿದೆ.

  • ಭಾಗಶಃ ರದ್ದು: ಜುಲೈ 18 & 25 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ನಿಲ್ದಾಣಗಳ ನಡುವೆ ಸಂಚರಿಸುವ (06571/06572) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ತಾಳಗುಪ್ಪ-ಕೆಎಸ್ಆರ್ ಬೆಂಗಳೂರು (20652) ರೈಲು, ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು (12725/12726) ರೈಲುಗಳನ್ನು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗಿದೆ.
  • ಮಾರ್ಗ ಬದಲಾವಣೆ: ಜುಲೈ 17 & 24 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ18 & 25 ರಂದು ಹೊರಡುವ ಮೈಸೂರು-ವಾರಣಾಸಿ (22687) & ಯಶವಂತಪುರ-ಜೈಪುರ (82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಮೈಸೂರು-ಬೆಳಗಾವಿ (17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮೈಸೂರು-ಉದಯಪುರ ಸಿಟಿ (19668) ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.

  • ರೈಲುಗಳ ನಿಯಂತ್ರಣ: ಜುಲೈ 16 & 23 ರಂದು ಬಿಕಾನೇರ್ ನಿಲ್ದಾಣದಿಂದ ಹೊರಡುವ ಬಿಕಾನೇರ್-ಯಶವಂತಪುರ (16588) ರೈಲನ್ನು ಮಾರ್ಗದಲ್ಲಿ 150 ನಿಮಿಷ, ಜುಲೈ 18 & 25 ರಂದು ಯಶವಂತಪುರ-ಹಜರತ್ ನಿಜಾಮುದ್ದೀನ್ (12629) ರೈಲು 50 ನಿಮಿಷ, ಕೆಎಸ್ಆರ್ ಬೆಂಗಳೂರು-ತಾಳಗುಪ್ಪ (20651) ರೈಲು 10 ನಿಮಿಷ, ಬೆಳಗಾವಿ-ಮೈಸೂರು (17325) ರೈಲು 55 ನಿಮಿಷ, ಚಾಮರಾಜನಗರ-ತುಮಕೂರು (07345) ರೈಲನ್ನು 120 ನಿಮಿಷ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತದೆ

ಸಮಯ ಮರುನಿಗದಿ: ಜುಲೈ 18 & 25 ರಂದು ಯಶವಂತಪುರ-ವಾಸ್ಕೋಡಗಾಮಾ (17309) ರೈಲು ಯಶವಂತಪುರದಿಂದ 60 ನಿಮಿಷ, ಜುಲೈ 24 ರಂದು ತುಮಕೂರು-ಶಿವಮೊಗ್ಗ ಟೌನ್ (06513) ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ ಎಂದು ನೈಋತ್ಯ ರೇಲ್ವೆ ಪ್ರಕಟಣೆ ತಿಳಿಸಿದೆ.