ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾಮಗಾರಿ ಹಿನ್ನೆಲೆ: ರೈಲುಗಳ ಸೇವೆಯಲ್ಲಿ ಬದಲಾವಣೆ

07:14 PM Jul 12, 2024 IST | Samyukta Karnataka

ಹುಬ್ಬಳ್ಳಿ : ನಿಟ್ಟೂರು ಮತ್ತು ಸಂಪಿಗೆ ರೋಡ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ 62ರಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:

ರೈಲುಗಳ ಸಂಚಾರ ರದ್ದು: ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳನ್ನು ಜುಲೈ 18 & 25 ರಂದು ರದ್ದು ಪಡಿಸಲಾಗುತ್ತಿದೆ.

ಜುಲೈ18 & 25 ರಂದು ಹೊರಡುವ ಮೈಸೂರು-ವಾರಣಾಸಿ (22687) & ಯಶವಂತಪುರ-ಜೈಪುರ (82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಮೈಸೂರು-ಬೆಳಗಾವಿ (17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮೈಸೂರು-ಉದಯಪುರ ಸಿಟಿ (19668) ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.

ಸಮಯ ಮರುನಿಗದಿ: ಜುಲೈ 18 & 25 ರಂದು ಯಶವಂತಪುರ-ವಾಸ್ಕೋಡಗಾಮಾ (17309) ರೈಲು ಯಶವಂತಪುರದಿಂದ 60 ನಿಮಿಷ, ಜುಲೈ 24 ರಂದು ತುಮಕೂರು-ಶಿವಮೊಗ್ಗ ಟೌನ್ (06513) ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ ಎಂದು ನೈಋತ್ಯ ರೇಲ್ವೆ ಪ್ರಕಟಣೆ ತಿಳಿಸಿದೆ.

Next Article