ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

09:00 PM Oct 14, 2024 IST | Samyukta Karnataka

ಬಾಗಲಕೋಟೆ(ಕುಳಗೇರಿ ಕ್ರಾಸ್): ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠದ ಭೈರನಹಟ್ಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚೊಳಚಗುಡ್ಡದಿಂದ ಭೈರನಹಟ್ಟಿಯವರೆಗೆ ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಶಿವಯೋಗಮಂದಿರ ಉಪಾಧ್ಯಕ್ಷ ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶ್ರೀಗಳು, ಕಾರ್ಗಿಲ್ ಹುತಾತ್ಮ ಯೋಧರ ಜ್ಯೋತಿ ರಥ ಎಳೆಯುತ್ತಿರುವುದು ದೇಶದಲ್ಲಿಯೇ ಪ್ರಥಮ. ದೇಶಕ್ಕಾಗಿ ಮಡಿದ ಯೋಧರ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ನಮಗೆಲ್ಲ ನಮ್ಮ ಸೈನಿಕರನ್ನ ನೆನಪು ಮಾಡಿಕೊಡುವ ಕೆಲಸ ಭೈರನಹಟ್ಟಿ ಶ್ರೀಮಠದಿಂದ ನಡೆಯುತ್ತಿದೆ. ಕಾರ್ಗಿಲ್ ವಿಜಯ ದಿನವನ್ನು ವಿವಿಧ ಕಾರ್ಯಕ್ರಮದೊಂದಿಗೆ ಶ್ರೀಮಠದಲ್ಲಿ ವಿನೂತನವಾಗಿ ಆಚರಿಸುತ್ತಿರುವುದು ದೇಶಭಕ್ತರಲ್ಲಿ ಸಂತಸ ತಂದಿದೆ ಎಂದರು.
ಶ್ರೀವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ರಾಜ್ಯ ಹೆದ್ದಾರಿ ಮೂಲಕ ಸಕಲ ವಾದ್ಯಗಳೊಂದಿಗೆ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ನಂತರ ರಾಯಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಾರ್ಗಿಲ್ ವಿಜಯ ಪತಾಕೆಯನ್ನು ಹಾರಿಸಿ 25ವರ್ಷ ಗತಿಸಿದವು. ಅನ್ನ ನೀಡುವ ರೈತರನ್ನ, ದೇಶ ಕಾಯುವ ಸೈನಿಕರನ್ನ ನೆನೆಯುವುದು ನಮ್ಮ ಕರ್ತವ್ಯ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಪ್ರಥಮವಾಗಿ ಮಡಿದ ಚೊಳಚಗುಡ್ಡದ ಶಿವಬಸಯ್ಯ ಕುಲಕರ್ಣಿಯವರ ಸ್ಮಾರಕದಿಂದ ಪ್ರಾರಂಭವಾದ ಜ್ಯೋತಿರಥಯಾತ್ರೆಯು ಬನಶಂಕರಿ, ಬಾದಾಮಿ, ಮುತ್ತಲಗೇರಿ, ತಿಮ್ಮಾಪೂರ ಎಸ್‌ಎನ್, ಕುಳಗೇರಿ ಕ್ರಾಸ್ ಮಾರ್ಗವಾಗಿ ಗೋವನಕೊಪ್ಪ, ಕೊಣ್ಣೂರ ಮೂಲಕ ಭೈರನಹಟ್ಟಿ ಶ್ರೀಮಠಕ್ಕೆ ತಲುಪಿತು. ಎಲ್ಲ ಗ್ರಾಮಸ್ಥರು, ಮಾಜಿ ಸೈನಿಕರು, ಗ್ರಾಪಂ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಯವರು ಭಾಗವಹಿಸಿದ್ದರು.

Tags :
bagalkotkargil warswamiji
Next Article