ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆ 32 ದಿನಗಳು…

02:30 AM May 31, 2024 IST | Samyukta Karnataka

ಮೂವತ್ತೆರಡು ದಿನಗಳ ಭಯಂಕರ ಪ್ರವಾಸ ಕಥನದ ದಪ್ಪ ಪುಸ್ತಕ ಇಷ್ಟರಲ್ಲಿಯೇ ಬಿಡುಗಡೆ ಮಾಡಲು ಅವರೆಲ್ಲ ಸಜ್ಜಾಗಿದ್ದಾರೆ. ನಾಳೆಯಿಂದ ರೆಸ್ಟೋ ರೆಸ್ಟು. ಅಲ್ಲಿ ಕುಳಿತು ಸುಮ್ಮನೇ ಏನು ಮಾಡುತ್ತಾನೆ? ಹಾಗಾಗಿ ಆತನಿಗೆ ಸಿಕ್ಕಾಪಟ್ಟೆ ಬಿಳೆಹಾಳಿ ಮತ್ತು ಪೆನ್ನುಗಳನ್ನು ಕೊಟ್ಟುಕಳುಹಿಸಿ ಅಲ್ಲಿ ಆತ ಬರೆಯಲಿ, ಬರೆದಹಾಳೆಗಳನ್ನು ಒಂದೆಡೆ ಮಾಡಿ ನಂತರ ನನ್ನ ಕಡೆ ಕೊಡಲಿ, ಅವುಗಳನ್ನು ಡಿಟಿಪಿ ಮಾಡಿಸಿ, ನನ್ನದೇ ಪ್ರಕಾಶನದಿಂದ ಪ್ರಿಂಟ್ ಮಾಡಿಸುತ್ತೇನೆ ಎಂದು ಅರಾಮ ಕುರ್ಚಿಯಲ್ಲಿ ಕುಳಿತು ಸಣ್ಣಧ್ವನಿಯಲ್ಲಿ ಹೇಳುತ್ತಿದ್ದರು. ಅಲ್ಲಿಗೆ ಬಂದ ತಿಡೂಧ ಅಪ್ಪಾಜಿ ಅದಕ್ಕೆ ನಾನೇ ಮುನ್ನುಡಿ ಬರೆಯುತ್ತೇನೆ ಹೇಗೂ ನನಗೆ ಅನುಭವ ಇದೆ ಎಂದು ಲುಂಗಿಮೇಲೆ ಕಟ್ಟುತ್ತ ಹೇಳಿದಾಗ… ಹೌದಪ್ಪ ಹೌದು ನೀನಲ್ಲದೇ ಮತ್ಯಾರು ಮುನ್ನುಡಿ, ಬರಿ..ಬರಿ ಎಂದು ಸುಮ್ಮನಾದರು. ಇನ್ನು ಬೆನ್ನುಡಿಯೊಂದು ಬೇಕಲ್ಲವೇ? ಆತನನ್ನು ಕೇಳಿದರೆ… ನನಗೆ ಆಗಲ್ಲ ಬ್ರದರ್… ಎಂದು ಕಡ್ಡಿಮುರಿದಂತೆ ಹೇಳಿಬಿಡುತ್ತಾನೆ. ಬೆನ್ನುಡಿ ಬಗ್ಗೆ ತಲೆಕೆಡೆಸಿಕೊಳ್ಳುವುದು ಬೇಡ… ಹೇಗೂ ಬೆನ್ನುಡಿಯಲ್ಲವೇ ಆ ಲೇಖಕನೇ ಬರೆದು ತನ್ನದೊಂದು ಫೋಟೋ ಹಾಕಲಿ. ಮೊದಲ ದಿನ ವಿಮಾನ ಹತ್ತಿದ್ದರೂ ಓಡಿಹೋದ ಎಂಬ ಅಪವಾದ, ಎರಡನೇ ದಿನ ಎಲ್ಲಿ ಹೋಗಿ ಇಳಿದ. ಏನೇನು ಮಾಡಿದ. ಮರುದಿನ ಮುಂಚಾಜೆ ಫೋನಿನ ಮುಖಾಂತರ, ಟಿವಿ ಮುಖಾಂತರ ಸುದ್ದಿ ತಿಳಿದಾಗ ಆತ ಮಾಡಿದ್ದೇನು? ಕೂಡಲೇ ಯಾರಿಗೆ ಕರೆಮಾಡಿದ? ಅವರೇನು ಅಂದರು? ಇವರೇನು ಅಂದರು? ಕಳೆದ ದಿನಗಳಲ್ಲಿ ಹಗಲಿನ ದಿನ ಮತ್ತು ರಾತ್ರಿದಿನಗಳು ಹೇಗಿದ್ದವು? ಮನೆಯವರು ಏನೆಂದರು? ಹೊರಗಿನವರು ಏನೆಂದರು? ಅವರಲ್ಲಿ ಯಾರಾದರೂ ಕರೆ ಮಾಡಿದ್ದರಾ? ಎನ್ನುವುದನ್ನು ರಸವತ್ತಾಗಿ ಬರೆಯುವುದಾಗಿ ಲೇಖಕರು ಹೇಳಿದ್ದಾರೆ. ಸುಮ್ಮನೇ ಅಂದವರು ಯಾರು? ನಿಜವಾಗಿ ಬೆಂದವರು ಯಾರು ಎಂದು ಕೊನೆಯ ಪುಟಗಳಲ್ಲಿ ಬರೆಯುತ್ತೇನೆ. ಮಧ್ಯೆ, ಮಧ್ಯೆ ಥ್ರಿಲ್ ಕೊಡಲು ನೀನಿಲ್ಲದೇ ನಾನು ಹೇಗೆ ಇರಲಿ ಎಂಬ ಸೆಂಟಿಮೆಂಟನ್ನೂ ಸೇರಿಸಲಾಗುತ್ತದೆ. ಒಟ್ಟಿನಲ್ಲಿ ಜನುಮ ಜನುಮಾಂತರದವರೆಗೆ ಈ ಪುಸ್ತಕವನ್ನು ಕಾಯ್ದಿರಿಸಿ ಓದಬಹುದಾಗಿದೆ ಎಂದು ಪ್ರಕಾಶಕರು ಹಗಲೆಲ್ಲ ಹೇಳಿದ್ದಾರೆ.

Next Article