ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಓ ನಲ್ಲ-ನಾ ಫ್ಯಾನಲ್ಲ…

03:00 AM Jun 14, 2024 IST | Samyukta Karnataka

ಸ್ವಲ್ಪ ಫೇಮಸ್ ಆದ ವ್ಯಕ್ತಿಗಳಿಗೆ ಭೇಟಿಯಾಗಿ ನಾನು ನಿಮ್ಮ ಫ್ಯಾನ್… ನಾನು ನಿಮ್ಮ ಫ್ಯಾನ್ ಅನ್ನುತ್ತಿದ್ದ ತಿಗಡೇಸಿ ಕಳೆದ ಮೂರು ದಿನಗಳಿಂದ ದೊಡ್ಡವರು ಭೇಟಿಯಾದರೆ ಸಾಕು ನಾನು ನಿಮ್ಮ ಫ್ಯಾನಲ್ಲ… ನಾನು ನಿಮ್ಮ ಫ್ಯಾನಲ್ಲ ಅನ್ನಲು ಶುರುಮಾಡಿದ್ದಾನೆ. ಆವಾಗ ದಪ್ಪಿನ ಆಟ ಕುಣಿದಿದ್ದ ತಾತಪ್ಪನನ್ನು ಭೇಟಿಯಾಗಿ ಆಕಾಶಮಲ್ಲಿಗೆ-ಚೆಂಡೂವಿನ ಹೂ ಗುಚ್ಚ ಕೊಟ್ಟು ನಾ ನಿಮ್ಮ ಅಭಿಮಾನಿಯಣ್ಣಾ… ನಾ ನಿನ್ನ ಅಭಿಮಾನಿಯಣ್ಣಾ ಎಂದು ಎರೆಡೆರಡು ಸಲ ದೊಡ್ಡ ಧ್ವನಿಯಿಂದ ಹೇಳಿ ಬಂದಿದ್ದ. ದೂತಿ ಪಾರ್ಟು ಮಾಡಿದ್ದ ಯಮನೂರಿಯ ಕಾಲು ಹಿಡಿದು ನಿನ್ನಂತಹ ನಟನೆ ಮಾಡುವವರು ಜಗತ್ತಿನಲ್ಲೇ ಇಲ್ಲ ಆದ್ದರಿಂದ ನಾನು ನಿಮ್ಮ ಫ್ಯಾನು ಅಂದುಬಂದಿದ್ದ. ಮಾತು ಮಾತಿಗೂ ಚಟಾಕಿ ಹಾರಿಸುತ್ತಿದ್ದ ಕನ್ನಾಳ್ಮಲ್ಲನ ಪ್ರತಿ ಮಾತಿಗೂ ಸಂಭ್ರಮಿಸುತ್ತಿದ್ದ ತಿಗಡೇಸಿ ಏನೇ ಹೇಳಿ ಕಣ್ರೀ ನಾ ನಿಮ್ಮ ಫ್ಯಾನು ಅನ್ನುತ್ತಿದ್ದ. ಮೇಕಪ್ ಮರೆಮ್ಮನನ್ನು ಮುಂದೆ ಕೂಡಿಸಿಕೊಂಡು ಜೋಕುಮಾರನ ಹಾಡು ಕೇಳಿ ಮೇಕಪ್ಪಮ್ಮಾ ನಾ ನಿನ್ನ ಫ್ಯಾನಮ್ಮಾ ಎಂದು ಜೋರಾಗಿ ಹೇಳಿಬಂದಿದ್ದ. ಲಾದುಂಚಿ ರಾಜ ಬೈಕ್ ಓಡಿಸುವುದಕ್ಕೆ ಆತನ ಫ್ಯಾನಾಗಿದ್ದೇನೆ ಎಂದು ಗೆಳೆಯರ ಮುಂದೆ ತಿಳಿಸಿದ್ದ. ಈತ ಎಷ್ಟು ಮಂದಿಗೆ ಅಂತ ಫ್ಯಾನ್ ಆಗುತ್ತಾನೆ ಎಂದು ತಳವಾರ್ಕಂಟಿ ಬಹಿರಂಗವಾಗಿಯೇ ಹೇಳಿದ್ದ. ಆದರೆ ಕಳೆದ ಮೂರು ದಿನಗಳಿಂದ ಮತ್ತೆ ತಾನು ಫ್ಯಾನು ಅನ್ನುತ್ತಿದ್ದ ಎಲ್ಲರ ಮನೆಗೆ ಹೋಗಿ… ನೋಡಿ ಏನೋ ಬಾಯಿ ಸ್ಲಿಪ್ ಆಗಿ ಅಂದುಬಿಟ್ಟಿದ್ದೆ. ದೇವರಾಣೆಗೂ ನಾನು ನಿಮ್ಮ ಫ್ಯಾನಲ್ಲ, ಫ್ಯಾನಲ್ಲ, ಫ್ಯಾನಲ್ಲ ಅಂದು ಬಂದಿದ್ದ. ಅದಕ್ಕೆ ಆತನ ಹಳೆಯ ಗೆಳತಿಯರೆಲ್ಲ ತಿಗಡೇಸಿಯನ್ನು ನೋಡಿದ ಕೂಡಲೇ ಓ ನಲ್ಲ-ನೀ ಫ್ಯಾನಲ್ಲ ಎಂದು ಎಂದು ಹಾಡುತ್ತಿದ್ದರು. ಕೊನೆಗೆ ಎಲ್ಲರೂ ಯಾಕೆ ನೀವು ಫ್ಯಾನ್‌ನಿಂದ ಹಿಂದೆ ಸರಿದಿದ್ದೀರಿ ಎಂದು ಕೇಳಿದರು. ಮೊದಲು ಹೇಳಲಿಲ್ಲ. ನಂತರ ತರಿಸಿದ ಪಾನಕವನ್ನು ಗಟಗಟ ಸೇವಿಸಿದ ನಂತರ…. ನೋಡ್ರೋ… ನಾನು ಫ್ಯಾನು ಅಂತ ಹೇಳಿದೆ ಅಂದರೆ ನನ್ನ ಸುಮ್ನೆ ಬಿಡ್ತಾರಾ? ನೋಡಿದಿರಿ ತಾನೆ? ಎಂದು ಹೇಳಿ ಗ್ಲಾಸಿನಲ್ಲಿ ಉಳಿದ ಪಾನಕ ಸೇವಿಸಿ ಡರ‍್ರನೇ ಡೇಗಿದ….

Next Article