For the best experience, open
https://m.samyuktakarnataka.in
on your mobile browser.

ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ

10:44 PM Mar 08, 2024 IST | Samyukta Karnataka
ಕಾಲೇಜಿನಲ್ಲಿ ಹಿಜಾಬ್  ಕೇಸರಿ ಶಾಲು ವಿವಾದ

ಹಾಸನ: ನಗರದ ಖಾಸಗಿ ಕಾಲೇಜಿನಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಆರಂಭವಾಗಿದೆ.
ನಗರದ ಹೊಸಕೊಪ್ಪಲು ಕೈಗಾರಿಕಾ ಪ್ರದೇಶದಲ್ಲಿರುವ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ರೀಲ್ಸ್ ಮಾಡಿದ್ದು ವಿವಾದ ಹುಟ್ಟು ಹಾಕಿದೆ. ಕಾಲೇಜಿಗೆ ಸಮವಸ್ತçದಲ್ಲಿ ಬರುತ್ತಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಇತ್ತೀಚೆಗೆ ತರಗತಿಯಲ್ಲಿ ಹಿಜಾಜ್ ಧರಿಸಲು ಆರಂಭಿಸಿದ್ದರು. ಆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದ ಹಿರಿಯ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲರು, ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವುದರಿಂದ ಸಮವಸ್ತ್ರ ಮಾತ್ರವೇ ಧರಿಸುವಂತೆ ಸಲಹೆ ನೀಡಿದ್ದರು. ಆದರೆ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ಬುದ್ಧಿಮಾತಿಗೂ `ಕ್ಯಾರೆ' ಎನ್ನದೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದರು. ಇದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿದ್ದಾರೆ. ಅಲ್ಲದೆ ಶಾಲು ಧರಿಸಿ ರೀಲ್ಸ್ ಕೂಡ ಮಾಡಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿಗೆ ಹೊಸ ತಲೆನೋವು ಶುರುವಾಗಿದೆ.