ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾವೇರಿ ಒಡಲಿಗೆ ಪ್ರಭಾವಿಗಳಿಂದ ಕನ್ನ.!

07:48 PM Mar 01, 2024 IST | Samyukta Karnataka

ಶ್ರೀರಂಗಪಟ್ಟಣ : ಬರಗಾಲದ ಬೇಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದರೆ ಇತ್ತ ಅಕ್ರಮವಾಗಿ ಡ್ಯಾಂಗೆ ಮೋಟಾರ್ ಅಳವಡಿಸಿಕೊಂಡು
ಫಾರ್ಮ್ ಹೌಸ್ ಗೆ ನೀರು ಸರಬರಾಜು ಮಾಡಿಕೊಳ್ಳುವ ಮೂಲಕ ಕೆಆರ್ ಎಸ್ ನ ಕನ್ನಂಬಾಡಿ ಅಣೆಕಟ್ಟೆಗೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಫಾರ್ಮ್ ಹೌಸ್‌ಗೆ ಡ್ಯಾಂನಿಂದಲೇ ಕಳ್ಳತನದ ಮೂಲಕ ನೀರು ಪೂರೈಕೆ: KRS ಡ್ಯಾಂ ಹಿನ್ನಿರಿಗೆ ಹೊಂದಿಕೊಂಡಂತಿರುವ ಎರಡು ಫಾರ್ಮ್ ಹೌಸ್‌ನ ನೀರು ಸರಬರಾಜಿಗೆ ಸುಮಾರು 200 ಮೀಟರ್ ಪೈಪ್ ಅಳವಡಿಸಿಕೊಂಡು ಡ್ಯಾಂ ನೀರಿಗೆ ಕನ್ನ ಹಾಕಲಾಗಿದೆ.

ಡ್ಯಾಂ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ: ಕುಡಿಯುವ ನೀರಿಗೆ ಸಮಸ್ಯೆ ಇದ್ರೂ ಕದ್ದು ಫಾರ್ಮ್ ಹೌಸ್ ಗೆ ನೀರು ಪೂರೈಕೆ ಮಾಡಿಕೊಂಡಿರುವುದಕ್ಕೆ ಸ್ಥಾಳೀಯರು ಕಿಡಿಕಾರಿದ್ದಾರೆ. ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆದಿರುವ ಪ್ರಭಾವಿಗಳ ವಿರುದ್ದ ಸ್ಥಳೀಯರು ಮಾಹಿತಿ ನೀಡಿದರೂ, ಕ್ರಮಕ್ಕೆ ಮುಂದಾಗಿದ ಅಧಿಕಾರಿಗಳು. ಫಾರ್ಮ್ ಹೌಸ್ ಮಾಲೀಕರ ಪ್ರಭಾವಕ್ಕೆ ಮಣಿದು ಕಣ್ಮುಚ್ಚಿ ಕುಳಿತದ್ದಾರೆಂದು ಆರೋಪಗಳು ಕೇಳಿ ಬರುತ್ತಿವೆ. ಅಕ್ರಮವಾಗಿ ಡ್ಯಾಂಗೆ ಮೋಟಾರ್ ಅಳವಡಿಸಿರುವವರ ವಿರುದ್ಧ ತತಕ್ಷಣ ಕ್ರಮಕ್ಕೆ ಒತ್ತಾಯಗಳು ಕೇಳಿ ಬರುತ್ತಿದ್ದು, ತಕ್ಷಣವೇ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Next Article