ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯವು ತುಂಬಿರುವ ಶುಭ ಸಂದರ್ಭದಲ್ಲಿ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನೆರವೇರಿತು
ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಹಾಲು. ಪುಷ್ಪ ಸಮರ್ಪಿಸಿ ಬಾಗಿನ ಸಮರ್ಪಣೆ ಮಾಡಿದರು.
ನಂತರ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು.ಕಾವೇರಿ ನಮ್ಮೆಲ್ಲರ ಜೀವನದಿ. 1ಲಕ್ಷ ಕೊಸೆಕ್ಸ್ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ. ಪ್ರಕೃತಿಯ ವಿಕೋಪ ದಿಂದ ಕಳೆದ ಸಾಲಿನಲ್ಲಿ ಅಣೆಕಟ್ಟೆ ತುಂಬಿಲ್ಲ. ಈ ಬಾರಿ ಉತ್ತಮವಾಗಿ ಮಳೆಯಾಗಿದೆ . ಕಾವೇರಿ ಜಲನಯನ ಪ್ರದೇಶಲ್ಲಿರುವ ನಾಲ್ಕು ಜಲಾಶಯಗಳು ಭರ್ತಿಯಾಗಿದೆ. ಈಗ ಇರುವ 114 ಟಿ ಎಂ ಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪಿಸುವ ಸಲುವಾಗಿ ನಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕಾವೇರಿ ವಿವಾದ ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದ್ದು ಈ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಕಾವೇರಿ ನೀರು ಪೋಲಾಗದಂತೆ ತಡೆಯಲು ಶಾಶ್ವತ ಪರಿಹಾರ ಮೇಕೆದಾಟು ಯೋಜನೆ. ಈ ಯೋಜನೆ ಮಂಜೂರು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ. ಯೋಜನೆ ಜಾರಿಯಾದರೆ ವಿದ್ಯುತ್ ತಯಾರಿಕೆ ಮಾಡಬಹುದು ಹಾಗೂ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಹಾಗೂ ಮಳೆ ಬಾರದ ದಿನಗಳಲ್ಲಿ ಸಂಕಷ್ಟಕ್ಕೆ ನೀರು ಬಳಕೆಯಾಗುತ್ತದೆ.
. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೃಷಿ ಇಲಾಖೆಯಿಂದ ರೈತರಿಗೆ ಬೇಕಾದ ಬಿತ್ತನೆ ಬೀಜ. ರಸ ಗೊಬ್ಬರ ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳನ್ನು ನೀಡಲಾಗಿದೆ. 3450ಕೋಟಿ ಹಣವನ್ನು ಕೇಂದ್ರ ದಿಂದ ಸುಪ್ರೀಂ ಕೋರ್ಟ್ ಮೂಲಕ ಪಡೆದು ಬರ ಪರಿಹಾರವನ್ನು ಸಹ ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ.
ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಈ ಬಾರಿಯ ಬಜೆಟ್ ನಲ್ಲಿ 3 ಲಕ್ಷದ 71 ಸಾವಿರ ಕೋಟಿ ಹಣವನ್ನು ಘೋಷಣೆ ಮಾಡಿ ಎಲ್ಲ ಇಲಾಖೆಗೂ ಅನುದಾನವನ್ನು ನೀಡಿದ್ದೇವೆ ಎಂದರು.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಾತನಾಡಿ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. 92 ವರ್ಷ ತುಂಬಿರುವ ಅಣೆಕಟ್ಟೆ ಬಾಗಿನ ಅರ್ಪಿಸಿ ರಾಜ್ಯದ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಮಳೆಗೆ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ತಿಳಿದಿಲ್ಲ ಎಂದರು.
ಕೃಷಿ ವಿಶ್ವವಿದ್ಯಾನಿಲಯ ಮಂಡ್ಯ ದಲ್ಲಿ ನಿರ್ಮಾಣ ಮಾಡಿ ಮತ್ತೊಂದು ಗರಿ ತೋಡಿಸುವ ಕೆಲಸವನ್ನು ಮಾಡಲಾಗುವುದು.ರಾಜ್ಯದಲ್ಲಿರುವ 80ಲಕ್ಷ ಹೇಕ್ತೇರ್ ಕೃಷಿ ಭೂಮಿಯಲ್ಲಿ ಹೀಗಾಗಲೇ 66 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಕೊನೆಯ ಭಾಗಕ್ಕೂ ನೀರು ತಲುಪಿಸ ಕೆಲಸ ಮಾಡಲು ಎಲ್ಲರೂ ಕೈಜೋಡಿಸಿ ಎಂದರು.
ಮೇಕೆದಾಟು ಕಾವೇರಿ ನದಿ ನೀರಿನ ಸಮಸ್ಯೆಗೆ ಒಂದು ಪರಿಹಾರ ಅದಕ್ಕಾಗಿ ಹೋರಾಟವನ್ನು ಮಾಡಿದ್ದೇವೆ ಅದಕ್ಕಾಗಿ ಕಾನೂನನ್ನು ಎದುರು ಹಾಕಿಕೊಂಡವು ಅಂದು ಮಾಡಿದ ಪ್ರತಿಜ್ಞೆಯಂತೆ ಜನರ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇವೆ. ನಮ್ಮ ಅಧಿಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಆಗಲಿ ಎಂದರು.
ಕಳೆದ ಬಜೆಟ್ನಲ್ಲಿ ಪ್ರವಾಸಿ ತಾಣವಾದ ಬೃಂದಾವನ ಉದ್ಯಾನವನ್ನು ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಅನುಮೋದನೆಯಾಗಿದೆ.ರೈತರಿಂದ ಜಮೀನನ್ನು ಪಡೆಯದೇ ಸರ್ಕಾರದಲ್ಲಿರುವ ಜಮೀನಿನಲ್ಲೇ ಆಣೆಕಟ್ಟೆಯ ಭದ್ರತೆಯನ್ನು ದೃಷ್ಟಿ ಯಲ್ಲಿ ಇಟ್ಟುಕೊಂಡು ಯೋಜನೆ ಮಾಡಲಾಗಿದೆ ಎಂದರು.
ಗಂಗಾರತಿ ರೀತಿಯಲ್ಲಿ ಕಾವೇರಿ ಮಾತೆಗೆ ಪ್ರತಿ ವಾರ ಆರತಿ ಮಾಡಲು ನಿಯೋಗವನ್ನು ರೂಪಿಸಲಾಗಿದೆ. ಕಾವೇರಿ. ಕಬಿನಿ. ಹೇಮಾವತಿ ಜಲನಯನ ಪ್ರದೇಶದಲ್ಲಿ ಕಾವೇರಿ ನಿಗಮದಿಂದ ಒಬ್ಬರು ನೀರು ಗಂಟಿ. ಒಬ್ಬರು ಪ್ರಗತಿಪರ ರೈತರು ಹಾಗೂ ಒಬ್ಬ ಅಭಿಯಂತರರಿಗೆ ಸನ್ಮಾನಿಸುವ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ರೈತರ ಸಮಸ್ಯೆಗೆ ನಿಜವಾಗಿ ಸ್ಪಂದಿಸುವ ಶಕ್ತಿ ಇರುವುದು ಕಾವೇರಿ ಮಾತೆಗೆ: ಚಲುವರಾಯಸ್ವಾಮಿ
ರೈತರ ಸಮಸ್ಯೆಗೆ ನಿಜವಾಗಿ ಸ್ಪಂದಿಸುವ ಕಾರ್ಯವು ಕಾವೇರಿ ಮಾತೆಯದ್ದಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಲ್ಲಿಸಿದಂತಹ ಅವಿಸ್ಮರಣೀಯ ದಿನವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದರು.
ಈ ನಾಡಿನಲ್ಲಿ ಬಹುಶ ಲಕ್ಷಾಂತರ ಅಣೆಕಟ್ಟುಗಳಿದ್ದು, ರಾಜ್ಯದಲ್ಲೂ ಸಹ ನೂರಾರು ಅಣೆಕಟ್ಟುಗಳಿವೆ. ಆದರೆ ಕೆ ಆರ್ ಎಸ್ ನ ಕಾವೇರಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿದ್ದು, ಒಂದು ಭಾವನಾತ್ಮಕ ಅಣೆಕಟ್ಟಾಗಿದೆ. ಇದಕ್ಕಿಂತ ದೊಡ್ಡ ಅಣೆಕಟ್ಟುಗಳು ರಾಜ್ಯದಲ್ಲಿ ಇದ್ದರೂ ಸಹ ಕೆ ಆರ್ ಎಸ್ ನಷ್ಟು ಮನಸೆಳೆದಿರುವ ಅಣೆಕಟ್ಟು ಯಾವುದು ಇಲ್ಲ. ಇಂತಹ ಅಣೆಕಟ್ಟಿನ ನಿರ್ಮಾಣಕ್ಕೆ ಕಾರಣರಾಗಿರುವಂತಹ ನಾಲ್ವಡಿ ಕೃಷ್ಣ ರಾಜ ಒಡೆಯರ್ ಮಹಾರಾಜರು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರ ಕೀರ್ತಿಯನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂದರು.
ನಮ್ಮ ಸರ್ಕಾರವು ಕೇವಲ ಆಡಳಿತ ಮಾಡಲಿಕ್ಕೆ ಮಾತ್ರ ಬಂದಿಲ್ಲ. ಜಿಲ್ಲೆಯ ಎಲ್ಲಾ ರೈತರ ಪರವಾದ ಯೋಜನೆಗಳನ್ನು ನೀಡಿ, ಜನತೆಯ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇವೆ ಎಂದರು.
ಕಳೆದ ಬೇಸಿಗೆಯಲ್ಲಿ ಬರಗಾಲ ಇದ್ದರೂ ಕೂಡ ಜಿಲ್ಲೆಗೆ ಬರದ ತೊಂದರೆ ರೈತರಿಗೆ ತಟ್ಟದಂತೆ 5 ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಒಳಿತು ಮಾಡಿದ್ದೇವೆ. ರೈತರಿಗೆ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ನೀಡುವ ಮೂಲಕ ಬೇಸಿಗೆಯಲ್ಲಿ ಬಂದಂತಹ ಬರಗಾಲವನ್ನು ಯಾವುದೇ ಸಮಸ್ಯೆಯಿಲ್ಲದೆ ಬಗೆ ಹರಿಸಿದ ಹೆಮ್ಮೆ ನಮ್ಮ ಸರ್ಕಾರದ್ದಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಯವರು ಕೆ ಆರ್ ಎಸ್ ಗೆ ಕಾವೇರಿ ಮಾತೆಗೆ 3 ನೇ ಬಾರಿ ಬಾಗಿನವನ್ನು ಅರ್ಪಿಸುವ ಸುಯೋಗ ಇಂದು ಒದಗಿ ಬಂದಿದೆ ಎಂದರು.
ದೇವರ ಕೃಪೆಯಿಂದ ಇಂದು ಕೆ ಆರ್ ಎಸ್ ಅಣೆಕಟ್ಟು ತುಂಬಿರುವ ಅದ್ಭುತವಾದ ಘಳಿಗೆಯಲ್ಲಿ ಈ ನಾಡಿನ ಕಾವೇರಿ ತಾಯಿಗೆ ನಿಮ್ಮೆಲ್ಲರ ಸಮ್ಮುಖದಲ್ಲಿ ಬಾಗಿನವನ್ನು ಅರ್ಪಿಸಲಾಗಿದೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದರು.
ಕರ್ನಾಟಕ ಹಾಗೂ ತಮಿಳುನಾಡಿನ ಸಮಸ್ಯೆಯನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ 2 ಕಮಿಟಿಯನ್ನು ಮಾಡಲಾಗಿದ್ದು, ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಸಹ ರೈತರ ಯಾವುದೇ ಸಮಸ್ಯೆಯಲ್ಲೂ ಕೂಡ ಜೊತೆ ನಿಂತು ಬಗೆಹರಿಸಲಾಗುವುದು. ದೇಶದ ಆಡಳಿತವನ್ನು ನಿರ್ಧಾರ ಮಾಡುವಂತದ್ದು ಜನತೆಯೇ ವಿನಃ ಯಾವುದೇ ಅಧಿಕಾರವಲ್ಲ ಎಂದರು.
ವಿಶ್ವ ದರ್ಜೆಯಲ್ಲಿ ಬೃಂದಾವನವನ್ನು ನಿರ್ಮಾಣ ಮಾಡಲಾಗುವುದು. ಮಂಡ್ಯ ಜಿಲ್ಲೆ ರೈತರ ಜಿಲ್ಲೆಯಾಗಿದ್ದು ನೂತನವಾಗಿ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ವಿಶ್ವ ವಿದ್ಯಾನಿಲಯವನ್ನು ಕಟ್ಟಿಸಲಾಗುವುದು. ಎಲ್ಲಾ ವಿಚಾರದಲ್ಲೂ ನಮ್ಮ ಸರ್ಕಾರ ಬದ್ಧತೆಯನ್ನು ತೋರುತ್ತದೆ ಎಂದರು.
ವೇದಿಕೆಯಲ್ಲಿ ಸಚಿವ ಹೆಚ್. ಸಿ. ಮಹದೇವಪ್ಪ. ಶಾಸಕರಾದ ನರೇಂದ್ರಸ್ವಾಮಿ.ರಮೇಶ್ ಬಾಬು ಬಂಡಿಸಿದ್ದೇಗೌಡ. ರವಿಕುಮಾರ್ ಗಣಿಗ. ಕೆ. ಎಂ. ಉದಯ್. ಹೆಚ್. ಟಿ. ಮಂಜು. ತನ್ವೀರ್ ಸೇಠ್.ಪುಟ್ಟರಂಗ ಶೆಟ್ಟಿ. ದಿನೇಶ್ ಗೂಳಿಗೌಡ. ಮಂಡ್ಯ ಜಿಲ್ಲಾಧಿಕಾರಿ. ಡಾ. ಕುಮಾರ. ಸೇರಿದಂತೆ ಹಲವು ಜನಪ್ರತಿನಿಧಿಗಳು. ಅಧಿಕಾರಿಗಳು ಉಪಸ್ಥಿತರಿದ್ದರು