ಕುಟುಂಬ ಸಮೇತ ರಾಯಲ್ ಸಿನಿಮಾ ವೀಕ್ಷಿಸಿದ ದರ್ಶನ್
01:03 PM Jan 21, 2025 IST | Samyukta Karnataka
ಬೆಂಗಳೂರು: ನಟ ದರ್ಶನ್ ಬಹುದಿನಗಳ ನಂತರ ಮೊದಲ ಬಾರಿಗೆ ಸಿನಿಮಾ ನೋಡಿದ್ದಾರೆ.
ನಟ ದರ್ಶನ್ ಜನವರಿ 20ರಂದು ರಾತ್ರಿ ಅಮ್ಮ ತಮ್ಮನ ಜೊತೆ, ಫ್ಯಾಮಿಲಿ ಜೊತೆಗೂಡಿ ರಾಯಲ್ ಚಿತ್ರ ನೋಡಿದ್ದಾರೆ. ಜಯಣ್ಣ ನಿರ್ಮಾಣದ ದಿನಕರ್ ನಿರ್ದೇಶನದ ವಿರಾಟ್ ಅಭಿನಯದ ರಾಯಲ್ ಸಿನಿಮಾ ಇದೇ ವಾರ ರಾಜ್ಯಾದ್ಯಂತ ರಿಲೀಸ್ ಆಗಲಿದೆ
ಜಯಣ್ಣ ಫಿಲಂಸ್ ನಿರ್ಮಾಣದ, ದಿನಕರ್ ತೂಗುದೀಪ ನಿರ್ದೇಶನದ “ರಾಯಲ್” ಚಿತ್ರ ಇದೇ ಜನವರಿ 24 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ