ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುರಿಗಳ ಮೇಲೆ ಏಕಕಾಲದಲ್ಲಿ ಮೂರು ಚಿರತೆಗಳ ದಾಳಿ

12:19 PM Nov 19, 2024 IST | Samyukta Karnataka

ಮಳವಳ್ಳಿ :ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಮೂರು ಚಿರತೆಗಳು ಏಕಕಾಲದಲ್ಲಿ ದಾಳಿ ನಡೆಸಿ ನಾಲ್ಕು ಕುರಿ ಬಲಿ ತೆಗೆದುಕೊಂಡಿರುವ ಘಟನೆ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಕೋಂ ಬಸವರಾಜು ಎಂಬುವರ ಕುರಿಗಳೇ ಬಲಿಯಾಗಿವೆ, ಇಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಚಿರತೆಗಳು ಗ್ರಾಮಕ್ಕೆ ನುಗ್ಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಬಲಿ ತೆಗೆದುಕೊ‌ಂಡಿದ್ದು, ಈ ಘಟನೆಯಿಂದ ಗ್ರಾಮಸ್ಥರು ಭಯಬೀತರಾಗಿದ್ದು, ಲಕ್ಷಾಂತರ ರೂ ಬೆಲೆಬಾಳುವ ನಾಲ್ಕು ಕುರಿಗಳ ಬಲಿಯಾಗಿದ್ದು, ಒಂದು ಮೇಕೆಗೆ ತೀವ್ರಗಾಯಗೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ನಾಗಮಾದೇವು ಮಾತನಾಡಿ, ರತ್ನಮ್ಮ ಕುಟುಂಬ ಬೋವಿ ಜನಾಂಗದ ಕಡುಬಡವರಾಗಿದ್ದು, ಕುರಿ ಸಾಕಿ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಜೊತೆಗೆ ಗ್ರಾಮದ ಜನರಿಗೆ ಭಯದ ವಾತಾವರಣ ನಿರ್ಮಿಸಿರುವ ಚಿರತೆಗಳನ್ನು ಬೋನು ಇಟ್ಟು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.

Next Article