For the best experience, open
https://m.samyuktakarnataka.in
on your mobile browser.

ಕೃಷ್ಣ ನದಿಗೆ ಏಕಾಏಕಿ ನೀರು ಬಿಡುಗಡೆ, ನಡುಗಡ್ಡೆಯಲ್ಲಿ ಸಿಲುಕಿದ ಕುರಿ ಗಾಯಿಗಳು

08:30 PM Oct 12, 2024 IST | Samyukta Karnataka
ಕೃಷ್ಣ ನದಿಗೆ ಏಕಾಏಕಿ ನೀರು ಬಿಡುಗಡೆ  ನಡುಗಡ್ಡೆಯಲ್ಲಿ ಸಿಲುಕಿದ ಕುರಿ ಗಾಯಿಗಳು

ತೆಪ್ಪಗಳ ಮೂಲಕ ಕುರಿ ಮತ್ತು ಕುರಿಗಾಯಿಗಳನ್ನು ರಕ್ಷಿಸಿದ ಸ್ಥಳೀಯರು

ಸುರಪುರ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ, ಕುರಿ ಮೇಯಿಸಲು ಹೋಗಿದ್ದ ಕುರಿ ಗಾಯಿ ಮತ್ತು ಕುರಿಗಳು ನದಿ ನೀರಿನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಕಕ್ಕೇರಾ ಸಮೀಪದ ಬನದೊಡ್ಡಿ ಗ್ರಾಮದ ಕುರಿ ಗಾಯಿಗಳು ಎಂದಿನಂತೆ ಸುಮಾರು 200 ಕುರಿಗಳೊಟ್ಟಿಗೆ ಮೇಯಿಸಲು ಹೋದಂತಹ ಸಂದರ್ಭದಲ್ಲಿ ಏಕಾಏಕಿ ಕೃಷ್ಣಾ ನೀರು ಸುತ್ತಲ ಆವರಿಸಿದೆ.

ಇದರಿಂದ ಗಾಬರಿಗೊಂಡ ಕುರಿ ಗಾಯಿಗಳು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳೀಯರು ತಿಂಥಣಿ ಗ್ರಾಮದ ನುರಿತ ಈಜು ಪಟುಗಳ ಸಹಾಯದಿಂದ, ತೆಪ್ಪಗಳ ಮೂಲಕ ಸುಮಾರು ಎರಡು ನೂರು ಕುರಿಗಳು ಮತ್ತು ಐದು ಜನ ಕುರಿಗಾಯಿಯಿಗಳನ್ನು ರಕ್ಷಣೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಸಂಬಂಧ ಪಟ್ಟ ತಾಲೂಕ ಮಟ್ಟದ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿವೆ..