For the best experience, open
https://m.samyuktakarnataka.in
on your mobile browser.

ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ

01:24 PM Feb 10, 2024 IST | Samyukta Karnataka
ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ

ಬೆಂಗಳೂರು: ಕೆಂಗಲ್ ಹನುಮಂತಯ್ಯನವರು ದಕ್ಷ ಆಡಳಿತಗಾರ, ಕರ್ನಾಟಕವನ್ನು ಅತ್ಯಂತ ದಕ್ಷತೆಯಿಂದ ಸುಮಾರು ನಾಲ್ಕೂವರೆ ವರ್ಷ ಆಳಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನಾಚಾರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಂಗಲ್ ಹನುಮಂತಯ್ಯನವರ ಜನ್ಮ ದಿನದಂದು ಅವರ ಸ್ಮರಣೆ ಮಾಡಿ ಗೌರವ ಸಲ್ಲಿಸಿದ್ದೇವೆ. ರಾಮನಗರ ಜಿಲ್ಲೆಯವರಾದ ಅವರು ಸಂವಿಧಾನ ಜಾರಿಯಾದ ನಂತರ ಮುಖ್ಯಮಂತ್ರಿಯಾದವರು. ಅವರ ಕಾಲದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯ ಮಂತ್ರಿಯಾದವರು. ವಿಧಾನಸೌಧದ ಕಟ್ಟಿಸಿದ್ದು ಅವರು. ಆದರೆ ದುರ್ದೈವ, ಅದನ್ನು ಅವರು ಉದ್ಘಾಟಿಸಲು ಬಿಡಲಿಲ್ಲ ಎಂದರು.

ಮಾದರಿ ಆಡಳಿತ: ಅವರ ಆಡಳಿತ ನಮಗೆಲ್ಲಾ ಮಾದರಿ. ವಿಧಾನಸೌಧದ ಪೂರ್ವದಿಕ್ಕಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದು, ಜನಸೇವೆಯೇ ಜನಾರ್ಧನ ಸೇವೆ ಎಂದು ಅದರ ಅರ್ಥ. ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು. ಹಳೇ ಮೈಸೂರು ಭಾಗದವರಾದರೂ ವಿಶಾಲ ಕರ್ನಾಟಕವಾಗಬೇಕೆಂದು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದರು. ಅವರ ತತ್ವ ಆದರ್ಶಗಳು ನಮಗೆ ಮಾದರಿ ಎಂದರು.