For the best experience, open
https://m.samyuktakarnataka.in
on your mobile browser.

ಕೆಐಎಡಿಬಿಯಲ್ಲಿ ಸಿ.ಎ ನಿವೇಶನಗಳ ಹಂಚಿಕೆ ಪಾರದರ್ಶಕ

08:06 PM Aug 23, 2024 IST | Samyukta Karnataka
ಕೆಐಎಡಿಬಿಯಲ್ಲಿ ಸಿ ಎ ನಿವೇಶನಗಳ ಹಂಚಿಕೆ ಪಾರದರ್ಶಕ

ನಾಗರಿಕ ಸೌಲಭ್ಯದ (CA) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ.

ಬೆಂಗಳೂರು: ಕೆಐಎಡಿಬಿಯಲ್ಲಿ ಸಿ.ಎ ನಿವೇಶನಗಳ ಹಂಚಿಕೆಗೆ ಕೈಗೊಂಡ ಪಾರದರ್ಶಕ ಕ್ರಮಗಳ ಬಗ್ಗೆ ಸಚಿವ ಎಂ. ಬಿ. ಪಾಟೀಲ ವಿವರಗಳನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು • ಸಿಎ ನಿವೇಶನಗಳನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆ ಮೂಲಕ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ.

  • ನಾಗರಿಕ ಸೌಲಭ್ಯದ (CA) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ.
  • ಇಷ್ಟಕ್ಕೂ ಸಿ.ಎ ನಿವೇಶನಗಳನ್ನು ಪ್ರಕಾರ ಹರಾಜು ಹಾಕುವ ಪದ್ದತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ.
  • ಸಿ.ಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದರ ಜತೆಗೆ ಇಲಾಖಾ ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗಿದೆ. ವೆಬ್ ಸೈಟ್ ನಲ್ಲಿ ಹಾಕುವ ವ್ಯವಸ್ಥೆ ಮೊದಲು ಇರಲಿಲ್ಲ. ಇದು‌ ಮೊದಲು.
  • ಸಿ.ಎ ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರ್ಕಾರದಿಂದ ಅನುಮೋದನೆ ಪಡೆದು ನೇರವಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಮೊದಲು ಸಿ.ಇ.ಒ., ಇವರ ಅಧ್ಯಕ್ಷತೆಯಲ್ಲಿನ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸ್ಸು ಮಾಡಿದ ನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ.
  • ಈ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಇಲಾಖಾ ಪ್ರಧಾನ ಕಾರ್ಯದರ್ಶಿ, ಇತರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರು, ಕೈಗಾರಿಕಾ ಆಯುಕ್ತರು, ಸಿ.ಇ.ಒ., ಕೆಐಎಡಿಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ಇತರೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
  • ಈ ಬಾರಿ ಒಟ್ಟು 377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನಗಳನ್ನು (96.59 ಎಕರೆ) ಮಾತ್ರ ಹಂಚಿಕೆ ಮಾಡಲಾಗಿದೆ. ಅಂದರೆ ಅಂದಾಜು 25% ಮಾತ್ರ ಹಂಚಿಕೆ ಮಾಡಿದ್ದು ಉಳಿದ ನಿವೇಶನಗಳು ಹಂಚಿಕೆಗೆ ಬಾಕಿ ಇವೆ. ಇನ್ನೂ 281 ಎಕರೆ ಜಾಗದಲ್ಲಿ 150 ನಿವೇಶನಗಳನ್ನು ಹಂಚಿಕೆ ಮಾಡಿಲ್ಲ.
  • ಒಂದೊಂದೇ ಅರ್ಜಿ ಬಂದ ಪ್ರಕರಣಗಳಲ್ಲಿ ಅಂತಹ ಹಂಚಿಕೆಯನ್ನು ಮಾಡಲು ಅವಕಾಶವಿದ್ದರೂ (ಇದು ಟೆಂಡರ್ ಪ್ರಕ್ರಿಯೆ ಅಲ್ಲ) ಇದನ್ನು ಪರಿಗಣಿಸದೆ ಹೊಸದಾಗಿ ನೋಟಿಫಿಕೇಷನ್ ಮಾಡಲಾಗುತ್ತಿದೆ. ಇದರಿಂದ ಅರ್ಹರಿಗೆ ಇನ್ನಷ್ಟೂ ಅವಕಾಶ ಲಭ್ಯವಾಗಲಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿತ್ತು. ಅದನ್ನು ಮತ್ತೆ ಹೊಸದಾಗಿ ಕರೆದಿದ್ದೇವೆ.
  • ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ 24.10 ರಷ್ಟು ಮೀಸಲಿಡುವ ಐತಿಹಾಸಿಕ ತೀರ್ಮಾನ ನನ್ನ ಅವಧಿಯಲ್ಲಿ ಆಗಿದೆ.
  • 2018ರ ಸರ್ಕಾರದ ತೀರ್ಮಾನದಂತೆ 1½ ಪಟ್ಟು ಹಂಚಿಕೆ ದರ ಇದ್ದಿದ್ದನ್ನು ದಿನಾಂಕ: 07.06.2021ರಂದು ಸರ್ಕಾರದಲ್ಲಿ prevailing allotment rate ಗೆ ಹಂಚಿಕೆ ಮಾಡಲು ತೀರ್ಮಾನಿಸಿ ಅದರಂತೆ ಕೆಐಎಡಿಬಿ ಗೆ ಸೂಚನೆ ನೀಡಲಾಗಿದೆ. ಹಾಗಾಗಿ ನನ್ನ ಅವಧಿಯಲ್ಲಿ ಸಿಎ ನಿವೇಶನಗಳ ಹಂಚಿಕೆ ದರವನ್ನು ಕಡಿಮೆ ಮಾಡಿಲ್ಲ. ಬದಲಿಗೆ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಲು ಕ್ರಮವಹಿಸಿದೆ.
  • ಸಿಎ ನಿವೇಶನಗಳು ನಾಗರೀಕ ಸೌಲಭ್ಯದ ಉದ್ದೇಶಕ್ಕಾಗಿ ಮತ್ತು ಕೈಗಾರಿಕೆಗಳ ಪೂರಕ ಉದ್ಧೇಶಗಳಿಗೆ ಬಳಕೆಯಾಗುವುದರಿಂದ ಹೆಚ್ಚಿನ ದರ ವಿಧಿಸಲಾಗುತ್ತಿಲ್ಲ. ಅಲ್ಲದೇ ಕೆಐಎಡಿಬಿ ಯು no profit no loss ಸಂಸ್ಥೆಯಾಗಿರುತ್ತದೆ.
  • ಕೆಐಎಡಿಬಿ ನಿಯಮಾವಳಿಗಳ ನಿಯಮ 7 ರಲ್ಲಿ ಕೆಐಎಡಿಬಿ ನಿವೇಶನಗಳ ಹಂಚಿಕೆಗಾಗಿ ವ್ಯಾಪಕ ಪ್ರಚಾರ/ಪತ್ರಿಕಾ ಪ್ರಕಟಣೆ ನೀಡಬೇಕೆಂಬ ನಿಯಮವಿದ್ದು ಅದರಂತೆ ವ್ಯಾಪಕ ಪ್ರಚಾರ ನೀಡಲಾಗಿದೆ. ಹಾಗಾಗಿ ನಿಯಮ ಉಲ್ಲಂಘನೆಯಾಗಿಲ್ಲ.
  • ಬೆಂಗಳೂರು ಮಾತ್ರವಲ್ಲದೇ ರಾಜ್ಯದ 21 ಜಿಲ್ಲೆಗಳಲ್ಲೂ ಇರುವ ಸಿಎ ನಿವೇಶನಗಳ ಹಂಚಿಕೆಗೆ ಅರ್ಜಿ ಅಹ್ವಾನಿಸಿ ಹಂಚಿಕೆ ಮಾಡಲಾಗಿದೆ ಎಂದರು.