For the best experience, open
https://m.samyuktakarnataka.in
on your mobile browser.

ಕೆಚ್ಚಲು ಕೊಯ್ದ ನೀಚರ ಬಂಧಿಸದಿದ್ದರೆ ಸಚಿವ ಜಮೀರ್ ವಿರುದ್ಧ ಹೋರಾಟ

02:04 PM Jan 12, 2025 IST | Samyukta Karnataka
ಕೆಚ್ಚಲು ಕೊಯ್ದ ನೀಚರ ಬಂಧಿಸದಿದ್ದರೆ ಸಚಿವ ಜಮೀರ್ ವಿರುದ್ಧ ಹೋರಾಟ

ಧಾರವಾಡ: ಹಸುಗಳ ಕೆಚ್ಚಲು ಕೊಯ್ದ ನೀಚರ ಬಂಧಿಸದಿದ್ದರೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಘಟನೆ ಗಮನಕ್ಕೆ ಬಂದಿದ್ದು. ಇದು ನೀಚ ಕೃತ. ರಾಜ್ಯದಲ್ಲಿ ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ಇದು ರಾಕ್ಷಸ ಕೃತ್ಯಕ್ಕೆ ಉದಾಹರಣೆ ಎಂದು ಕಿಡಿಕಾರಿದ್ದಾರೆ.
ಜಮೀರ್ ಅಹ್ಮದ್ ಅವರೇ, ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲಾ, ಅದು ನಮಗೆ ಅನ್ನ ನೀಡುತ್ತದೆ, ಗೊಬ್ಬರ ಕೊಡುತ್ತದೆ, ಔಷಧಿ ಕೊಡುತ್ತದೆ ಹಾಗೂ ರೈತರ ಬೆನ್ನೆಲುಬು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.