ಕೇಂದ್ರ ಸರಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತೀಬಾರಿ ಗೌರವಿಸುತ್ತಾ ಬಂದಿದೆ
ಬೆಂಗಳೂರು: ಕಿತ್ತೂರು ಉತ್ಸವ 200ನೇ ವರ್ಷದ ಸಂಭ್ರಮಾಚರಣೆಯಲ್ಲಿ ರಾಣಿ ಚೆನ್ನಮ್ಮನ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಕೇಂದ್ರ ಸರಕಾರ ರಾಷ್ಟ್ರಕ್ಕಾಗಿ ಹೋರಾಡಿದ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತೀಬಾರಿ ಸ್ಮರಿಸಿ ಗೌರವಿಸುತ್ತಾ ಬಂದಿದ್ದು, ನಾಡು ನುಡಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹೋರಾಡಿದ ನಮ್ಮ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ 1824ರ ಸ್ವಾತಂತ್ರ್ಯ ಸಂಗ್ರಾಮದ ವಿಜಯಕ್ಕೆ ಇಂದಿಗೆ 200ನೇ ವರ್ಷದ ಸಂಭ್ರಮ. ಇದರ ಸಲುವಾಗಿ ಕೇಂದ್ರ ಸರಕಾರ ರಾಣಿ ಚೆನ್ನಮ್ಮನ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದು. ನಿನ್ನೆ ರಾಣಿ ಚೆನ್ನಮ್ಮನ ಜಯಂತಿಯ ಅಂಗವಾಗಿ ಕಿತ್ತೂರಿನಲ್ಲಿ ನಡೆದ "ಕಿತ್ತೂರು ಉತ್ಸವ" ಕಾರ್ಯಕ್ರಮದಲ್ಲಿ ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿ ಮತ್ತು ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿ, ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅಂಚೆ ಚೀಟಿ ಬಿಡುಗಡೆಯಾಗಿದೆ. ನಾಡಿನ ರಕ್ಷಣೆಗೆ ಹೋರಾಡಿದ ಪ್ರತಿಯೊಬ್ಬರ ಬಲಿದಾನವೂ ನಮ್ಮ ಮುಂದಿನ ಪೀಳಿಗೆಯೂ ಸ್ಮರಿಸಿ ಗೌರವಿಸುವಂತಾಗಬೇಕು ಎಂಬುದು ನಮ್ಮ ಸರಕಾರದ ನಿಲುವು ಎಂದಿದ್ದಾರೆ.