For the best experience, open
https://m.samyuktakarnataka.in
on your mobile browser.

ಕೇಂದ್ರ ಸರ್ಕಾರದಿಂದ ಪಡಿತರ ಚೀಟಿ ರದ್ದು: ಬಿಜೆಪಿಯವರು ಯಾಕೆ ಮಾತಾಡುತ್ತಿಲ್ಲ?

12:55 PM Nov 21, 2024 IST | Samyukta Karnataka
ಕೇಂದ್ರ ಸರ್ಕಾರದಿಂದ ಪಡಿತರ ಚೀಟಿ ರದ್ದು  ಬಿಜೆಪಿಯವರು ಯಾಕೆ ಮಾತಾಡುತ್ತಿಲ್ಲ

ಕೇಂದ್ರ ಸರ್ಕಾರ 5. 80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ ಆದರೆ ಈ ವಿಚಾರ ಯಾಕೆ ಬಿಜೆಪಿಯವರು ಮಾತಾಡುತ್ತಿಲ್ಲ?

ಮಂಗಳೂರು: ಉಪ ಚುನಾವಣೆಯ ಫಲಿತಾಂಶದಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಗಂಭೀರವಾಗಿ ಪರಿಗಣಿಸುವದಿಲ್ಲ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವು ಕಡೆ ಬಡತನ ರೇಖೆಗಿಂತ ಕಡಿಮೆ ಇರುವ 80/90 ಪರ್ಸೆಂಟ್ ರದ್ದಾಗಿರುವ ಬಗ್ಗೆ ಆರೋಪ‌ ಮಾಡಲಾಗುತ್ತಿದೆ, ಆದರೆ ವೈಜ್ಞಾನಿಕವಾಗಿ‌ ನೋಡಿದಾಗ ಅದು ಸಾಧ್ಯವಿಲ್ಲ, ಅನರ್ಹ ಕಾರ್ಡು‌ಗಳನ್ನು ರದ್ದು ಪಡಿಸಲಾಗಿದೆ, ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಸೇರಿದಂತೆ ಇತರ ಮಾನದಂಡ ಆದರಿಸಿ ಕಾರ್ಡ್ ರದ್ದು ಪಡಿಸಲಾಗಿದೆ ಎಂದು ಸಿಎಂ ಹಾಗೂ ಆಹಾರ ಸಚಿವರು ಸ್ಪಷ್ಟ ಪಡಿಸಿದ್ದಾರೆ, ಕೆಲವು ತಪ್ಪು ಆಗಿದೆ ಅದನ್ನು ಸರಿಸಡಿಸುತ್ತೇವೆ, ತಪ್ಪಾಗಿರೋದು ಸರಿಪಡಿಸಲೇ ಬಾರದು ಅನ್ನೋದು ಯಾವ ಲಾಜಿಕ್, ಕೇಂದ್ರ ಸರ್ಕಾರ 5. 80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ ಆದರೆ ಈ ವಿಚಾರ ಯಾಕೆ ಬಿಜೆಪಿಯವರು ಮಾತಾಡುತ್ತಿಲ್ಲ? ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಮುಟ್ಟ ಬೇಕು, ಮಾಧ್ಯಮವರೂ ಕೂಡ ಇದನ್ನು ತಿಳಿದು ಹೇಳಬೇಕು, ಗೃಹ ಲಕ್ಷ್ಮಿ ಯೋಜನೆಗೂ ಪಡಿತರಕ್ಕೂ ಯಾವುದೇ ಸಂಬಂಧ ಇಲ್ಲ, ಕೆಲವು ಪಡಿತರ ಚೀಟಿ ರದ್ದು ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದೆ ಅದನ್ನು ಸರ್ಕಾರ ಸರಿ ಮಾಡುತ್ತೆ, ವ್ಯವಸ್ಥೆ ಸುಧಾರಣೆ ಮಾಡುವಾಗ ಸ್ಪಲ್ಪ ಸಮಸ್ಯೆ ಬರುತ್ತೆ, ಅದನ್ನು ಸರಿ ಪಡಿಸುತ್ತೇವೆ ಎಂದರು.

ಮೂಡ ಹಗರಣದಲ್ಲಿ ಸಿಎಂ ಗೆ ಇಡಿ ನೋಟಿಸ್: ಕೇಂದ್ರ ಸರ್ಕಾರ ಇಡಿ, ಸಿಬಿಐ ಯನ್ನು ದಾಳಗಳಾಗಿ ಬಳಸುತ್ತಿದ್ದಾರೆ, ಇಡಿ ಬಿಜೆಪಿಯ ಅಂಗ ಸಂಸ್ಥೆಯಾಗಿದೆ, ನೈತಿಕತೆ ಉಳಿದು‌ಕೊಂಡಿಲ್ಲ, ಇದು ದುರ್ದೈವ, ಇಡಿ ನೋಟಿಸ್ ಕೊಡೋದು ಅಪಪ್ರಚಾರ‌ ಮಾಡಿಸೋದು
ವಿರೋಧ ಪಕ್ಷವನ್ನು ಸೋಲಿಸಲು, ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇಡಿಯನ್ನು ಬಳಸುತ್ತಿದೆ.

ನಬಾರ್ಡ್ ಅನುದಾನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ: ನಬಾರ್ಡ್‌ನಲ್ಲಿ 2500 ಕೋಟಿ ಕಡಿತವಾಗಿದೆ, ಇದು ಅತ್ಯಂತ ಪ್ರಮುಖ ವಿಚಾರ, ಪ್ರಹ್ಲಾದ್ ಜೋಶಿ ಇದರ ಬಗ್ಗೆ ಮಾತಾಡಲಿ, ಕೇಂದ್ರ ಸಚಿವರ ಜೊತೆ ಮಾತಾಡುತ್ತೇನೆ ಅಂತ ಹೇಳಲು ಅವರಿಗೆ ಬಾಯಿ ಬರುದಿಲ್ಲ
ಕೇಂದ್ರಕ್ಕೆ ಬಿಜೆಪಿಯವರು ಗುಲಾಮರಾಗುತ್ತಿದ್ದಾರೆ, ನವು ಗುಲಾಮರಲ್ಲ ನಾವು ಹೋರಾಟ ಮಾಡುತ್ತೇವೆ.

ಆಸ್ಪತ್ರೆಯಲ್ಲಿ 20 ಶೇಕಡಾ ಶುಲ್ಕ ಹೆಚ್ಚಳ: ಸೇವಾ ಶುಲ್ಕ ಆಸ್ಪತ್ರೆಗೆ ಹೋಗುತ್ತೆ, ಸಣ್ಣ ಪರಿರಣೆ ಮಾಡಿದ್ದಾರೆ ಅಷ್ಟೇ, ಅದು ಸರ್ಕಾರಕ್ಕೆ ಹೋಗಲ್ಲ, ಅದು ಗ್ಯಾರಂಟಿಗೂ ಹೋಗಲ್ಲ, ಗ್ಯಾರಂಟಿಗೂ ಶುಲ್ಕ ಪರಿಷ್ಕರಣೆಗೆ ಲಿಂಕ್ ಇಲ್ಲ, ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ಏನು ಆಗುದಿಲ್ಲ, ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ ಅಷ್ಟೇ,ಅಸ್ಪತ್ರೆಯ ಹಣ ಆಸ್ಪತ್ರೆ ಯಲ್ಲೇ ಇರುತ್ತೇ. ಆಸ್ಪತ್ರೆಯ ಅಭಿವೃದ್ದಿಗೆ ಬಳಕೆ ಆಗುತ್ತೇ.

ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆ : ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ, ಇದರ ಬಗ್ಗೆ ತಿಳಿದು ಮಾತಾಡುತ್ತೇನೆ, ಇದೊಂದು ಗಂಭೀರ ವಿಚಾರ, ನಕ್ಸಲನ್ನು ಮುಖ್ಯ ವಾಹಿನಿಗೆ ತರುವ ಕೆಲಸ ನಡೆದಿದೆ, ತೀವ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ, ನಾವು ಯಾರನ್ನು ಕೊಂದು ಹಾಕುವ ಉದ್ದೇಶ ಇಲ್ಲ.

Tags :