ಕೇಜ್ರಿವಾಲ್‌ಗೆ ಜಾಮೀನು ಮಂಜೂರು
11:37 AM Jul 12, 2024 IST | Samyukta Karnataka
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರಿಗೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ(ಪಿಎಂಎಲ್‌ಎ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠದಿಂದ ಈ ತೀರ್ಪು ಹೊರಬಿದ್ದಿದೆ. ಕೇಜ್ರೀವಾಲ್ ಎತ್ತಿದ್ದ ಕೆಲವೊಂದು ಕಾನೂನಾತ್ಮಕ ಅಂಶಗಳು ವಿಚಾರಣಾ ಯೋಗ್ಯ ಎಂದು ಪರಿಗಣಿಸಿದ ನ್ಯಾಯಪೀಠ, ಉನ್ನತ ಪೀಠದ ವಿಚಾರಣೆಗೆ ಶಿಫಾರಸು ಮಾಡಿದೆ.
ಆದರೆ ಸಿಬಿಐ ಪ್ರಕರಣದಲ್ಲೂ ಕೂಡ ಅವರು ಬಂಧನವಾಗಿರುವುದರಿಂದ ತಕ್ಷಣವೇ ಹೊರಬರುವಂತಿಲ್ಲ. ಸಿಬಿಐ ಪ್ರಕರಣದ ವಿಚಾರಣೆಯೂ ಶುಕ್ರವಾರ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆದಿದ್ದು, ಕೇಜ್ರೀವಾಲ್ ಅವರ ಬಂಧನವನ್ನು ಜುಲೈ ೨೫ರವರೆಗೆ ವಿಸ್ತರಿಸಿದೆ. ಇದಕ್ಕೂ ಮೊದಲು ನ್ಯಾಯಾಲಯ, ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್ ಪರಿಗಣನೆಗೆ ತೆಗೆದುಕೊಂಡಿತು.