For the best experience, open
https://m.samyuktakarnataka.in
on your mobile browser.

ಕೈಗೆ ವಿನೇಶ್, ಬಜರಂಗ್

10:58 PM Sep 06, 2024 IST | Samyukta Karnataka
ಕೈಗೆ ವಿನೇಶ್  ಬಜರಂಗ್

ದೆಹಲಿ: ಒಲಿಂಪಿಕ್ ಖ್ಯಾತಿಯ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಇಬ್ಬರೂ ಒಲಿಂಪಿಕ್ ಪದಕ ವಿಜೇತರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇಬ್ಬರು ಪೈಲ್ವಾನರೂ ಪಕ್ಷ ಸೇರ್ಪಡೆಗೂ ಮೊದಲು ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. `ಕುಸ್ತಿ ಪಟುಗಳನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದ ವೇಳೆ, ಕಾಂಗ್ರೆಸ್ ಪಕ್ಷ ನಮ್ಮ ಜೊತೆಯಲ್ಲಿ ನಿಂತಿತ್ತು. ಆ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ವಿನೇಶ್ ಹೇಳಿದ್ದಾರೆ.