ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

"ಕೈ" ಓಲೈಕೆಗೆ ರಾಜ್ಯದ ಜನ ಕಂಗಾಲು

03:50 PM Oct 28, 2024 IST | Samyukta Karnataka

ಲ್ಯಾಂಡ್ ಜಿಹಾದ್ ರಾಜ್ಯದಲ್ಲಿಯೂ ಇದು ವ್ಯಾಪಿಸಿದ್ದು, ನಮ್ಮ ಜಿಲ್ಲೆಗೂ ಬರುವ ದಿನಗಳು ದೂರವಿಲ್ಲ. ರೈತರ ಭೂಮಿಗೆ ಕನ್ನ ಹಾಕಿ, ಅವರ ಬದುಕನ್ನು ಕಸಿದುಕೊಳ್ಳುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಅವರ ಶಾಪ ತಟ್ಟದೇ ಇರದು

ಮಂಗಳೂರು: ಇಷ್ಟು ದಿನ ಓಲೈಕೆ ರಾಜಕಾರಣಕ್ಕಾಗಿ ಹಿಂದೂಗಳನ್ನು ಕಡೆಗಣಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಲ್ಯಾಂಡ್ ಜಿಹಾದ್ ಮೂಲಕ ಸಾವಿರಾರು ಅನ್ನದಾತರ ಸಾವಿರಾರು ಎಕರೆ ಭೂಮಿಯನ್ನು ಕಿತ್ತುಕೊಂಡು ವಕ್ಫ್ ಆಸ್ತಿ ಎಂದು ಘೋಷಿಸಲು ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಲತಲಾಂತರಗಳಿಂದ ತಮ್ಮ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದ ರೈತರಿಗೆ, ವಕ್ಫ್ ಮಂಡಳಿ ರಾಜ್ಯ ಸರ್ಕಾರದ ಬೆಂಬಲದಿಂದ ಏಕಾಏಕಿ ನೋಟಿಸ್ ನೀಡಿ ಸುಮಾರು 15 ಸಾವಿರ ಎಕರೆ ಭೂಮಿ ಕಬಳಿಸುವ ಹುನ್ನಾರ ನಡೆಸಿರುವುದು ಅಕ್ಷಮ್ಯ. ತಮಿಳುನಾಡು, ಬಿಹಾರದಂತಹ ರಾಜ್ಯಗಳಲ್ಲಿ ಇಂತಹ ಅನ್ಯಾಯವನ್ನು ಕಾಣುತ್ತಿದ್ದೆವು. ಇದೀಗ ನಮ್ಮ ರಾಜ್ಯದಲ್ಲಿಯೂ ಇದು ವ್ಯಾಪಿಸಿದ್ದು, ನಮ್ಮ ಜಿಲ್ಲೆಗೂ ಬರುವ ದಿನಗಳು ದೂರವಿಲ್ಲ. ರೈತರ ಭೂಮಿಗೆ ಕನ್ನ ಹಾಕಿ, ಅವರ ಬದುಕನ್ನು ಕಸಿದುಕೊಳ್ಳುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಅವರ ಶಾಪ ತಟ್ಟದೇ ಇರದು. ರಾಜ್ಯ ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಹೋರಾಟ ನಡೆಸಿಯಾದರೂ ಸರಿ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷವು ಕೇವಲ ತನ್ನ ಓಟ್ ಬ್ಯಾಂಕ್ ಗಾಗಿ ವಕ್ಫ್ ಕಾಯ್ದೆ ಎಂಬ ನಿರಂಕುಶ ಕಾಯ್ದೆಯನ್ನು ತಂದು ದೇಶದಲ್ಲಿ ಗಂಡಾಂತರ ಸೃಷ್ಟಿಸಿತ್ತು. ಇದೀಗ ದೇಶದ ಹಿತಕ್ಕಾಗಿ ಆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ನರೇಂದ್ರ ಮೋದಿಯವರ ಸರಕಾರ ಪ್ರಸ್ತಾವಿಸಿದ್ದು ಆ ನಿಟ್ಟಿನಲ್ಲಿ ಅಗತ್ಯ ಎಲ್ಲ ಕಾರ್ಯಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ತಿದ್ದುಪಡಿ ಪ್ರಸ್ತಾವನೆ ಅಂಗೀಕಾರಗೊಳ್ಳುವ ಮೊದಲು ತುಘಲಕ್‌ ದರ್ಬಾರ್‌ ಮೂಲಕ ಸಾಧ್ಯವಾದಷ್ಟು ರೈತರ, ಹಿಂದುಳಿದವರ, ದಲಿತರ, ದೇವಸ್ಥಾನಗಳ ಭೂಮಿಯನ್ನು ಕಬಳಿಸಿ ವಕ್ಫ್ ವಶಕ್ಕೆ ನೀಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಶಾಸಕರು ಆರೋಪಿಸಿದರು.

Tags :
#ದಕ್ಷಿಣಕನ್ನಡ
Next Article