For the best experience, open
https://m.samyuktakarnataka.in
on your mobile browser.

ಕೊರೊನಾ ಆತಂಕಬೇಡ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್​ ಕಡ್ಡಾಯ: ತಜ್ಞರ ಸಲಹೆ

04:08 PM Dec 18, 2023 IST | Samyukta Karnataka
ಕೊರೊನಾ ಆತಂಕಬೇಡ  60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್​ ಕಡ್ಡಾಯ  ತಜ್ಞರ ಸಲಹೆ

ಕೊಡಗು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೊಡಗಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತಾನಾಡಿರುವ ಅವರು, ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದೇವೆ. ರವಿ ಅವರ ನೇತೃತ್ವದಲ್ಲಿ ನಿನ್ನೆಯೂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿದ್ದಾರೆ. ಕೆಲವು ಸಲಹೆ ಮಾರ್ಗಸೂಚಿ ಪಡೆದಿದ್ದೇವೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು. ಜನ ಓಡಾಡಬಾರದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿಲ್ಲ - ಸಹಜ ಸ್ಥಿತಿಯಲ್ಲೇ ಇದೆ, ಯಾವುದೇ ನಿರ್ಬಂಧವಿಲ್ಲ ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ನಿರ್ಬಂಧ ವಿಧಿಸುತ್ತೇವೆ - ಸದ್ಯಕ್ಕೆ ರಾಜ್ಯದಲ್ಲಿ ಅಂಥಾ ಪರಿಸ್ಥಿತಿ ಇಲ್ಲ, ಆತಂಕ ಬೇಡ ಎಂದಿದ್ದಾರೆ. ಈ ಬಗ್ಗೆ ನಾಳೆ ತಾಂತ್ರಿಕ ಸಮಿತಿ ಜೊತೆಗೆ ಆರೋಗ್ಯ ಸಚಿವ ಸಭೆ ನಡೆಯಲಿದ್ದು ಆರಂಭದಲ್ಲೇ ಕೊರೊನಾ ಕಟ್ಟಿಹಾಕಲು ಸರ್ಕಾರ ನಿರ್ದರಿಸಿದೆ.