For the best experience, open
https://m.samyuktakarnataka.in
on your mobile browser.

ಕೊರ್ಬಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ: 4 ಎಸಿ ಬೋಗಿಗಳು ಭಸ್ಮ

05:12 PM Aug 04, 2024 IST | Samyukta Karnataka
ಕೊರ್ಬಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ  4 ಎಸಿ ಬೋಗಿಗಳು ಭಸ್ಮ

ವಿಶಾಖಪಟ್ಟಣಂ: ಕೊರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್‌ಗಳು ಸುಟ್ಟು ಭಸ್ಮವಾದ ಘಟನೆ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದ್ದು, ಯಾವುದೇ ಪ್ರಣಾಹಾನಿ ಸಂಭವಿಸಿಲ್ಲ.
ನಿಂತಿದ್ದ ಕೊರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲಿನ ಬಿ-7 ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಬಿ-6 ಮತ್ತು ಎಂ-1 ಬೋಗಿಗಳಿಗೆ ವ್ಯಾಪಿಸಿದೆ. ತಕ್ಷಣ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಿದರು.
ಬೆಂಕಿ ಹೊತ್ತಿಕೊಳ್ಳುವ ವೇಳೆಗೆ ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದಿದ್ದರು. ರೈಲು ಬೆಳಗ್ಗೆ 6 ಗಂಟೆಗೆ ಛತ್ತೀಸ್‌ಗಢದ ಕೊರ್ಬಾದಿಂದ ಪ್ಲಾಟ್‌ಫಾರ್ಮ್ ನಂಬರ್ ನಾಲ್ಕಕ್ಕೆ ಬಂದಿತ್ತು ಮತ್ತು ನಂತರ ಮಧ್ಯಾಹ್ನ 2 ಗಂಟೆಗೆ ತಿರುಪತಿಗೆ ಹೊರಡಬೇಕಿತ್ತು.