ಕೊಲೆ ಪ್ರಕರಣ: ನಾಲ್ವರು ಬಂಧನ
ಕಲಬುರಗಿ: ನಗರದ ಹೊರ ವಲಯದ ಅಜಾದಪುರದಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೌನೇಶ ಗುತ್ತೇದಾರ (30) ಅವರ ತಾಯಿ ಸುನೀತಾ(50) ಮತ್ತು ತಮ್ಮ ಹಾಗೂ ತಂಗಿ ಬಂಧಿತ ಆರೋಪಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕೊಪ್ಪಿಸಲಾಗಿದೆ ಎಂದರು.
ಕೊಲೆಯಾದ ಚಂದ್ರಕಾಂತ್ ಜಮಾದಾರ್ ಮನೆ ಹಿತ್ತಲಿನಲ್ಲಿ ಹತ್ತು ಅಡಿ ಜಾಗ ಇತ್ತು. ಪಕ್ಕದ ಮನೆ ನಿವಾಸಿ ಮೌನೇಶ್ ಗುತ್ತೇದಾರ್ ಚಂದ್ರಕಾಂತ ಜೊತೆ ಆ ಜಾಗ ತಮಗೆ ಸೇರಬೇಕು ಎನ್ನುತ್ತಿದ್ದ. ಚಂದ್ರಕಾಂತ ಆ ಜಾಗ ತಮಗೆ ಸೇರಬೇಕು ಎಂದು ಹೇಳಿದ್ದ. ಹೀಗೆ ಜಾಗದ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ ಅದು ವಿಕೋಪಕಕ್ಕೆ ಹೋಗಿದ್ದು, ಚಂದ್ರಕಾಂತ್‌ನನ್ನು ಮೌನೇಶ್ ಗುತ್ತೇದಾರ್ ಹಾಗೂ ಕುಟುಂಬದವರು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು. ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ನಗರ ಪೊಲೀಸ್ ಆಯುಕ್ತಾಯಲದ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿರುವ ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಸಹಾಯದಿಂದ ಪತ್ತೆ ಮಾಡಿ ಅಂದಾಜು 38 ಲಕ್ಷ ರೂ.ಮೌಲ್ಯದ ಒಟ್ಟು 200 ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ವಿವರಿಸಿದರು.