For the best experience, open
https://m.samyuktakarnataka.in
on your mobile browser.

ಕೋರ್ ಬ್ಯಾಂಕಿಂಗ್‌ನತ್ತ ಗಮನ

01:13 PM Aug 10, 2024 IST | Samyukta Karnataka
ಕೋರ್ ಬ್ಯಾಂಕಿಂಗ್‌ನತ್ತ ಗಮನ

ನವದೆಹಲಿ: ಹಣಕಾಸು ಮಸೂದೆ 2024 ರಲ್ಲಿ ಬ್ಯಾಂಕಿಂಗ್-ಸಂಬಂಧಿತ ಕ್ರಮಗಳು ಮತ್ತು ನಿರ್ಧಾರಗಳನ್ನು ಚರ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಡಳಿಯ ಬಜೆಟ್ ನಂತರದ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಭಾಗವಹಿಸಿದ್ದರು.

ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವರು ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಠೇವಣಿಗಳ ಮೇಲಿನ ಬಡ್ಡಿ ದರಗಳು, ಮತ್ತು ಸಾಲವನ್ನು ಅನಿಯಂತ್ರಿತಗೊಳಿಸಲಾಗಿದೆ; ಬ್ಯಾಂಕ್‌ಗಳು ದರಗಳನ್ನು ನಿರ್ಧರಿಸಲು ಮುಕ್ತವಾಗಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ,
ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡಿಕೆ ಸೇರಿದಂತೆ ಕೋರ್ ಬ್ಯಾಂಕಿಂಗ್‌ಗೆ ಗಮನಹರಿಸುವಂತೆ ಸರ್ಕಾರ ಮತ್ತು ಆರ್‌ಬಿಐ ಬ್ಯಾಂಕುಗಳಿಗೆ ನಿರಂತರವಾಗಿ ಹೇಳುತ್ತಿದೆ" ಎಂದು ಸೀತಾರಾಮನ್ ಹೇಳಿದರು, ಬ್ಯಾಂಕುಗಳು ತಮ್ಮ ಮೂಲಭೂತ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿಹೇಳಿದರು.
ನವದೆಹಲಿಯ ಆರ್‌ಬಿಐ ಕಚೇರಿಯಲ್ಲಿ ನಡೆದ ಈ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿದಂತೆ ಕೇಂದ್ರೀಯ ಬ್ಯಾಂಕ್ ಮಂಡಳಿಯ ಇತರ ಸದಸ್ಯರು ಇದ್ದರು.

Tags :