ಕೋಲಾರ ಪೊಲೀಸ್ ಸಿಬ್ಬಂದಿಗೆ ಅಭಿನಂದಿಸಿದ ಸಿಎಂ
ಬೆಂಗಳೂರು: 6 ದಿನದ ನವಜಾತ ಶಿಶುವನ್ನು ಜಿಲ್ಲಾಸ್ಪತ್ರೆಯಿಂದ ಅಪಹರಿಸಿರುವ ಘಟನೆ ನಡೆದಿದೆ. ಪ್ರಕರಣ ದಾಖಲಾದ 6 ಗಂಟೆಯಲ್ಲೆ ಮಗು ರಕ್ಷಿಸಿ, ತಾಯಿಗೆ ಪೊಲೀಸರು ಒಪ್ಪಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ತಾಯಿ ಮಗುವಿನ ಚಿತ್ರವನ್ನು ಹಾಕಿ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆಯ ಸಾಲುಗಳನ್ನು ಬರೆದಿದ್ದಾರೆ. "ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶುವನ್ನು 24 ಗಂಟೆಗಳ ಒಳಗೆ ಮರಳಿ ತಾಯಿ ಮಡಿಲಿಗೆ ಸೇರಿಸಿರುವ ಕೋಲಾರ ಜಿಲ್ಲಾ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ: ನವಜಾತ ಶಿಶುವನ್ನು 24 ಗಂಟೆಗಳ ಒಳಗೆ ಮರಳಿ ತಾಯಿ ಮಡಿಲಿಗೆ ಸೇರಿಸಿರುವ ಕೋಲಾರ ಜಿಲ್ಲಾ ಪೊಲೀಸ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿ ಪ್ರಶಂಸನೀಯ ವ್ಯಕ್ತ ಪಡಿಸಿ ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ನವಜಾತಾ ಶಿಶುವನ್ನು 24 ಗಂಟೆಗಳ ಒಳಗಾಗಿ ರಕ್ಷಿಸಿ ಮಗುವನ್ನು ತಾಯಿಯ ಮಡಿಲು ಸೇರಿಸಿ ತಮಿಳುನಾಡಿನಲ್ಲಿ ಅವಿತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ . ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸರ ಕಾರ್ಯಾಚರಣೆಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕೈ ಜೋಡಿಸಿರುತ್ತಾರೆ. ಅಪಹರಣದ ಮಾಹಿತಿ ಸಾಮಾಜಿಕ ಜಾಲತಾಣಗಳ ಮೂಲಕ ವೇಗವಾಗಿ ಪ್ರಸಾರವಾದದ್ದು, ಬಹುತೇಕ ನಾಗರೀಕರು ಈ ಬಗ್ಗೆ ಕಾಳಜಿ ತೋರಿದ್ದು ಪ್ರಶಂಸನೀಯ. ಸಾಮಾಜಿಕ ಜಾಲತಾಣಗಳನ್ನು ಇಂತಹ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಕೋಲಾರ ಜಿಲ್ಲಾ ಪೊಲೀಸ್ ಈ ಮೂಲಕ ಜಿಲ್ಲೆಯ ಸಕಲ ಜನತೆಗೆ, ಮಾದ್ಯಮ ಮಿತ್ರರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಮರ್ಪಿಸುತ್ತಿದೆ. ನಮ್ಮೆಲ್ಲರ ಈ ನಡೆ ಸ್ವಸ್ಥ ಹಾಗೂ ಜವಾಬ್ದಾರಿಯುತ ನಾಗರೀಕ ಸಮಾಜಕ್ಕೆ ಒಂದು ಸ್ಪಷ್ಟ ನಿದರ್ಶನ ಎಂದಿದ್ದಾರೆ.