ಕ್ಯಾನ್ಸರ್ ಜಾಗೃತಿಗಾಗಿ ವಾಕಥಾನ್
ಹುಬ್ಬಳ್ಳಿ: ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿಯು ಕ್ಯಾನ್ಸರ್ ಕುರಿತು ಜಾಗೃತಿ ಮತ್ತು ಈ ಮಾರಣಾಂತಿಕ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಲು ವಾಕಥಾನ್ ಆಯೋಜಿಸುವ ಮೂಲಕ ಪೂರ್ವಭಾವಿ ಹೆಜ್ಜೆ ಇಟ್ಟಿದೆ.
ಈ ವಾಕಥಾನ್ ಮೂಲಕ ಕ್ಯಾನ್ಸರ್ನ ಆರಂಭಿಕ ಪತ್ತೆ ಮತ್ತು ಸಮಯೋಚಿತ ಹಸ್ತಕ್ಷೇಪದ ಮಹತ್ವದ ಬಗ್ಗೆ ಗಮನ ಸೆಳೆಯಲು ಹಾಗೂ ಸಮುದಾಯಗಳ ಯೋಗಕ್ಷೇಮದ ಬದ್ಧತೆಯೊಂದಿಗೆ ಹುಬ್ಬಳ್ಳಿ ಹಾಗೂ ಸುತ್ತಲಿನ ಜನರಿಗೆ ಶಿಕ್ಷಣ ಮತ್ತು ಜ್ಞಾನ ನೀಡುವುದು ಎಚ್ಸಿಜಿ ಎನ್ಎಂಆರ್ನ ಧ್ಯೇಯವಾಗಿದೆ.
ವಾಕಥಾನ್ ಇಂದು(ರವಿವಾರ) ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಂಡು, KIMS ಮುಖ್ಯ ದ್ವಾರದಿಂದ ಮತ್ತು ಉಣಕಲ್ ಕೆರೆ ಉದ್ಯಾನವನದ ಮುಂಭಾಗದಲ್ಲಿ ಕೊನೆಗೊಂಡಿತು. ದೇಶಪಾಂಡೆ ಫೌಂಡೇಶನ್ನ ಸಿಇಒ ಪಿ.ಎನ್. ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ದೇಶಪಾಂಡೆ ಫೌಂಡೇಶನ್ನ ಉಪ ನಿರ್ದೇಶಕ ರಾಜಬ್ಲಿ ಎಂ, ಹುಬ್ಬಳ್ಳಿ-ಧಾರವಾಡದ ಎಸಿಪಿ ವಿನೋದ ಮುಕ್ತೇದಾರ್ ಮತ್ತು ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ನ ಸಿಬ್ಬಂದಿ ಅವರೊಂದಿಗೆ ಪಾಲ್ಗೊಂಡರು. ಹೆಚ್ಚುವರಿಯಾಗಿ, ದೇಶಪಾಂಡೆ ಫೌಂಡೇಶನ್ ಮತ್ತು ವಿಘ್ನೇಶ್ವರ ನರ್ಸಿಂಗ್ ಕಾಲೇಜಿನ 900 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಈ ವಾಕಥಾನ್ನ ಯಶಸ್ಸಿಗೆ ಇನ್ನಷ್ಟು ಕಾರಣವಾಯಿತು. ವಾಕಥಾನ್ ಹುಬ್ಬಳ್ಳಿಯ ಯುವಕರಲ್ಲಿ ಕ್ಯಾನ್ಸರ್ ವಿರುದ್ಧದ ಅವರ ಸಾಮೂಹಿಕ ಮಿಷನ್ನಲ್ಲಿ ಏಕತೆಯ ಭಾವನೆ ಬೆಳೆಸಲು ಸಹಾಯ ಮಾಡಿತು.
ಕರ್ನಾಟಕ, ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ನ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಈ ವಾಕಥಾನ್ನಲ್ಲಿ ಯುವ ಪೀಳಿಗೆಯ ಭಾಗವಹಿಸುವಿಕೆಯ ಮಹತ್ವದ ಕುರಿತು ಒತ್ತಿಹೇಳಿದರು, "HCG NMR ನಲ್ಲಿ, ನಮ್ಮ ಧ್ಯೇಯವು ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಹಾಗೂ ಪ್ರಾರಂಭಿಕ ಪತ್ತೆಯ ಕುರಿತು ಜಾಗೃತಿ ಮೂಡಿಸುವುದಾಗಿದೆ. ನಾವು ಈ ಕ್ಯಾನ್ಸರ್ ಆರೈಕೆಯೊಂದಿಗೆ ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ಸಮರ್ಪಿತರಾಗಿದ್ದೇವೆ. ಈ ಯುದ್ಧದಲ್ಲಿ ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ನಿಮ್ಮೋಂದಿಗೆ ನಾವಿದ್ದೇವೆ ಎಂದು ವಿಶ್ವಾಸ ಮೂಡಿಸಿದರು. ಇಂದು ನಡೆದ ಈ ವಾಕಥಾನ್ ಹುಬ್ಬಳ್ಳಿಯಲ್ಲಿ ನಮ್ಮ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಮತ್ತು ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಮ್ಮ ಸಮುದಾಯದ ಅಚಲ ಬದ್ಧತೆಯನ್ನು ತೋರಿಸುತ್ತದೆ ಎಂದರು. ಈ ಸಮಾಜದಲ್ಲಿ ಆರೋಗ್ಯಕರ ಭವಿಷ್ಯಕ್ಕೆ ದಾರಿ ಮಾಡಿಕೊಡಲು ಈ ರೋಗದ ಕುರಿತು ಅರಿವು ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ ಎಂದರು.
ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಬ್ದುಲ್, ಈ ಉಪಕ್ರಮದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, "ಆರೋಗ್ಯ ವೃತ್ತಿಪರರಾಗಿ, ನಾವು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು ನಮ್ಮ ಆದ್ಯತೆಯಾಗಿದೆ. ವಾಕಥಾನ್ ಸಮುದಾಯ, ವಿಶೇಷವಾಗಿ ಯುವಕರನ್ನು ತೊಡಗಿಸಿಕೊಳ್ಳಲು ಮತ್ತು ಈ ದೀರ್ಘಕಾಲದ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಸಕಾರಾತ್ಮಕ ಕ್ರಿಯೆಯನ್ನು ಪ್ರೇರೇಪಿಸಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು."
ಈ ವಾಕಥಾನ್ನಲ್ಲಿ 800ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದು, ವಾಕಥಾನ್ ಕ್ಯಾನ್ಸರ್ ಜಾಗೃತಿ ಮತ್ತು ತಡೆಗಟ್ಟುವಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಕ್ಯಾನ್ಸರ್ ಆರೈಕೆಗೆ ಅದರ ಸಮಗ್ರ ವಿಧಾನದ ಭಾಗವಾಗಿ, ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ ನಿರಂತರವಾಗಿ ಮತ್ತು ಪಟ್ಟುಬಿಡದೆ ಜಾಗೃತಿ ಮೂಡಿಸಲು ಶ್ರಮಿಸುತ್ತದೆ.