ಕ್ರಾಂತಿವೀರ ಸಂಗೋಳಿ ರಾಯಣ್ಣನವರ ಪ್ರತಿಮೆ ವಿರೋಪ
ಹೆದ್ದಾರಿ ತಡೆದು ಪ್ರತಿಭಟನೆ: ಆರೋಪಿ ಪೊಲೀಸ್ ವಶಕ್ಕೆ
ಕಲಬುರಗಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆಗೆ ವಿರೋಪಗೊಳಿಸಿದ ಘಟನೆ ಆಳಂದ ಪಟ್ಟಣದಲ್ಲಿ ಬುಧವಾರ ಬೆಳೆಗಿನ ಜಾವ ನಡೆದಿದೆ.
ಆಳಂದ ಪಟ್ಟಣದ ಹಳೆಯ ಚೆಕ್‌ಪೋಸ್ಟ್ ಕ್ರಾಸ್‌ನಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಣವರ ಪ್ರತಿಮೆಗೆ ಬೆಳಗಿನ ೮:೩೦ಗಂಟೆಯ ಸುಮಾರಿಗೆ ಕುಡಿದ ಅಮಲಿನಲ್ಲಿ ಬೆಳಮಗಿ ಗ್ರಾಮದವರನ್ನೆಲಾದ ವ್ಯಕ್ತಿಯೋರ್ವ ಪ್ರತಿಮೆಗೆ ಭಗ್ನಗೊಳಿಸಿದ್ದಾನೆ. ಕುಡುಕನ ಈ ಕೃತ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಉದ್ರಿಕ್ತರಾಗಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ದಾವಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಮುಖರು ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ್ದ ಡಿವೈಎಸ್‌ಪಿ ಗೋಪಿ ಬಿ.ಆರ್. ಸಿಪಿಐ ಪ್ರಕಾಶ ಯಾತ್ನೂರ ಮತ್ತವರ ಪೊಲೀಸ್‌ರು ಪ್ರತಿಮೆ ವಿರೋಪಗೊಳಿಸಿದ ಎನ್ನಲಾದ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದರಿಂದಾಗಿ ಹೊಸ ಪ್ರತಿಮೆಯ ಬೇಡಿಕೆಯನ್ನಿಟ್ಟಿರುವ ಸಮಾಜ ಬಾಂಧವರು ಪ್ರತಿಭಟನೆ ಹಿಂದಕ್ಕೆ ಪಡೆದ ಮೇಲೆ ಪರಿಸ್ಥಿತಿ ಶಾಂತಗೊoಡಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷ ಸಿದ್ಧು ಪೂಜಾರಿ, ನಾಗರಾಜ ಘೋಡಕೆ, ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ, ಸಂಗೋಳ್ಳಿ ರಾಯಣ್ಣ ಯುವ ಸಂಘದ ಅಧ್ಯಕ್ಷ ಬಾಲಾಜಿ ಘೋಡಕೆ, ಕಲ್ಯಾಣಿ ದೇವಂತಗಿ, ಮಲ್ಲಿಕಾರ್ಜುನ ತೊಗರೆ, ಮಾಂತು ಚಿತಲಿ ಮೊದಲಾದವರು ಪಾಲ್ಗೊಂಡು, ಪ್ರತಿಮೆ ಭಗ್ನಗೊಳಿಸಿದ ಆರೋಪಿಯನ್ನು ಕ್ರಮ ಜರುಗಿಸಬೇಕು ಹೊಸ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಳಿಕ ಕುರುಬರ ಸಂಘವು ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.