For the best experience, open
https://m.samyuktakarnataka.in
on your mobile browser.

ಕ್ರಿಕೆಟ್ ಜಗಳ: ಗುಂಪು ಘರ್ಷಣೆ

10:39 AM May 24, 2024 IST | Samyukta Karnataka
ಕ್ರಿಕೆಟ್ ಜಗಳ  ಗುಂಪು ಘರ್ಷಣೆ

ಬೆಳಗಾವಿ: ಕ್ರಿಕೆಟ್ ಜಗಳ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ನಡುವೆ ನಡೆದ ಗುಂಪು ಘರ್ಷಣೆಯಿಂದ ಶಹಾಪುರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಅಳ್ವಾನ್​​ನ ಆದರ್ಶ ಮರಾಠ ವಿದ್ಯಾಮಂದಿರ ಶಾಲೆ ಗ್ರೌಂಡ್​ನಲ್ಲಿ ಗುರುವಾರ ಸಂಜೆ 4.30ಕ್ಕೆ ಅಪ್ರಾಪ್ತರು ಕ್ರಿಕೆಟ್ ಆಟ ಆಡಿದ್ದರು. ನಂತರ ಗೆದ್ದ ತಂಡದ ಮೇಲೆ ಮತ್ತೊಂದು ತಂಡದಿಂದ ಹಲ್ಲೆ ನಡೆದಿತ್ತು. ಘರ್ಷಣೆ ಮುಂದುವರಿದು ಸಂಜೆ 6 ಗಂಟೆಗೆ ಒಂದು ಯುವಕರ ಗುಂಪು ಕಲ್ಲು ತೂರಾಟ ಮಾಡಿತ್ತು. ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಲ್ಲು ತೂರದಂತೆ ಅಳ್ವಾನ್ ಗಲ್ಲಿ ನಿವಾಸಿಗಳು ಎಚ್ಚರಿಕೆ ನೀಡಿದ್ದರು. ಸಂಜೆ 6.15ಕ್ಕೆ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್ ಸ್ಥಳಕ್ಕೆ ಆಗಮಿಸಿದರು. ಪೊಲೀಸ್​ ಜೀಪ್​ನಲ್ಲಿ ಮಹಿಳಾ ಅಧಿಕಾರಿ ಆಗಮಿಸಿದ ವೇಳೆ ಯುವಕರ ಗುಂಪೊಂದು ತಲ್ವಾರ್​ ಎಸೆದು ಅಲ್ಲಿಂದ ಕಾಲ್ಕಿತ್ತಿದೆ. ಯುವಕರ ನಡುವಿನ ಗಲಾಟೆಯಲ್ಲಿ ಹಲವು ಮಂದಿಗೆ ಗಾಯಗಳಾಗಿವೆ. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೆಚ್ಚಿನ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ.