For the best experience, open
https://m.samyuktakarnataka.in
on your mobile browser.

ಕ್ರಿಕೆಟ್ ಬೆಟ್ಟಿಂಗ್ ಜಾಗೃತಿಗೆ RCB in ಪೊಲೀಸ್‌ ಇಲಾಖೆ ಟೀಮ್‌ ಎಂಟ್ರಿ

03:41 PM Nov 30, 2024 IST | Samyukta Karnataka
ಕ್ರಿಕೆಟ್ ಬೆಟ್ಟಿಂಗ್ ಜಾಗೃತಿಗೆ rcb in ಪೊಲೀಸ್‌ ಇಲಾಖೆ ಟೀಮ್‌ ಎಂಟ್ರಿ

ಹುಬ್ಬಳ್ಳಿ: ಐಪಿಎಲ್ 2025 ರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಆರ್‌ಸಿಬಿ ಸೇರಿದಂತೆ ಎಲ್ಲಾ ಟೀಮ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿವೆ. ಇದರ ನಡುವೆ ಹೊಸ ಟೀಮ್‌ ಎಂಂಟ್ರಿಯಾಗಿದ್ದು, ಕ್ರಿಕೆಟ್‌ ಬೆಟ್ಟಿಂಗ್‌ ಕುಳಗಳಿಗೆ ನಡುಕು ಹುಟ್ಟಿಸಿದೆ.
ಅರೇ ಇದೇನು ಅಂತೀರಾ.. ಹೌದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌ ಇಲಾಖೆ ಕ್ರಿಕೆಟ್ ಬೆಟ್ಟಿಂಗ್ ಕುರಿತು ಜಾಗೃತಿ ಮೂಡಿಸಲು RCB ಪೇಜ್ ಮಾದರಿಯ ಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿದ್ದಾರೆ. ಪೋಸ್ಟ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌ ಇಲಾಖೆ RCB in ಪೊಲೀಸ್‌ ಇಲಾಖೆ ಎಂಬ ನಾಮದೇಯದೊಂದಿಗೆ @SayNoToBetting ಪ್ರೊಪೈಲ್‌ ಐಡಿ ರೂಪದಲ್ಲಿ ಜಾಗೃತಿ ಮೂಡಿಸಿದೆ. ಕ್ರಿಕೆಟ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡು ಎಷ್ಟೋ ಜನರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ನಲುಗುತ್ತಿವೆ. ಆದ್ದರಿಂದ ಕ್ರಿಕೆಟ್ ಬೆಟ್ಟಿಂಗ್ ಆಡಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂಬ ಸಂದೇಶವನ್ನು ನೀಡಿದ್ದಾರೆ, ಈ ವೈರಲ್ ಚಿತ್ರ ಎಲ್ಲರ ಗಮನ ಸೆಳೆದಿದೆ.

Tags :