For the best experience, open
https://m.samyuktakarnataka.in
on your mobile browser.

ಕ್ರಿಮಿನಲ್ ಕೇಸ್ ನ್ಯಾಯಾಲಯದಲ್ಲಿ ಹೋರಾಟ

11:20 PM Feb 04, 2024 IST | Samyukta Karnataka
ಕ್ರಿಮಿನಲ್ ಕೇಸ್ ನ್ಯಾಯಾಲಯದಲ್ಲಿ ಹೋರಾಟ

ಬೆಳಗಾವಿ: ಕ್ರಿಮಿನಲ್ ಕೇಸ್ ದಾಖಲಾಗಿರುವುದು ನ್ಯಾಯಾಲಯದಲ್ಲಿ ಆದ್ದರಿಂದ ನ್ಯಾಯಾಲಯದಲ್ಲಿ ಮಾತ್ರ ಹೋರಾಟ, ಅದನ್ನು ಬಿಟ್ಟು ಹೊರಗಡೆ ಹೋರಾಟ ಇಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ ಅವರು, ಈ ಹಿಂದೆ ಹಿಂದೂ ಪದದ ಹೇಳಿಕೆ ಕುರಿತು ಚರ್ಚೆಗೆ ಗ್ರಾಸ ಆಗಿದ್ದರಿಂದ ಮೊದಲು ಯಾರೋ ಕೇಸ್ ಹಾಕಿದ್ರು, ಕೇಳ ನ್ಯಾಯಾಲಯದಲ್ಲಿ ರಿಜೆಕ್ಟ್ ಆಗಿತ್ತು. ಈಗ ಅದರಲ್ಲಿ ಏನಿದೆಯೆಂದು ನೋಡಬೇಕು. ಕೋರ್ಟ್ ಏನು ಆದೇಶ ಮಾಡಿದೆ ಅಂತ ನೋಡೋಣ ಎಂದರು.
ಹಿಂದು ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ಬಗ್ಗೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಆದರೆ ಅದರ ಪ್ರತಿ ನನಗೆ ಸಿಕ್ಕಿಲ್ಲ ಎಂದರು.