For the best experience, open
https://m.samyuktakarnataka.in
on your mobile browser.

ಕ್ರೀಡಾ ಪಟುಗಳು ಕ್ರೀಡಾ ಪ್ರೋತ್ಸಾಹಕರ ಶ್ರಮವನ್ನು‌ ಸದ್ಬಳಕೆ ಮಾಡಿಕೊಳ್ಳಿ

04:54 PM Dec 16, 2023 IST | Samyukta Karnataka
ಕ್ರೀಡಾ ಪಟುಗಳು ಕ್ರೀಡಾ ಪ್ರೋತ್ಸಾಹಕರ ಶ್ರಮವನ್ನು‌ ಸದ್ಬಳಕೆ ಮಾಡಿಕೊಳ್ಳಿ

ಶ್ರೀರಂಗಪಟ್ಟಣ: ಕ್ರೀಡಾಪಟುಗಳು ಕ್ರೀಡಾ ಪ್ರೋತ್ಸಾಹಕರು ಹಾಗೂ ಕ್ರೀಡಾ ಆಯೋಜಕರ ಶ್ರಮವನ್ನು‌ ಸಾರ್ಥಕತೆ ಮಾಡಿಕೊಳ್ಳಬೇಕು‌ ಎಂದು ಪಟ್ಟಣದ ಟೌನ್ ವೃತ್ತ ನಿರೀಕ್ಷಕ ಪ್ರಕಾಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶ್ರೀರಂಗಪಟ್ಟಣ ವಾಹಿನಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕಿನ ಕ್ರೀಡಾಸಕ್ತರು ಹಾಗೂ ವಿದ್ಯಾರ್ಥಿಗಳಗೆ ಖೊಖೋ,‌ ಕಬ್ಬಡ್ಡಿ, ವಾಲಿಬಾಲ್ ಹಾಗೂ‌ ಅಥ್ಲೆಟಿಕ್ಸ್ ಉಚಿತ ತರಭೇತಿ ಶಿಹಿರಕ್ಕೆ ಭೇಟಿ ನೀಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
ನಾನು ವಿದ್ಯಾರ್ಥಿಗಳಾಗಿದ್ದ ಸಮಯದಲ್ಲಿ‌ ನಮಗೆ ಕ್ರೀಡೆಯ ಬಗ್ಗೆ ಯಾರೂ ತರಭೇತಿ ನೀಡುತ್ತಿರಲಿಲ್ಲ. ನಮ್ಮ ಸ್ವ ಹಿತಾಸಕ್ತಿಯಿಂದ ಕ್ರೀಡೆಯಲ್ಲಿ‌ ತೊಡಗಿಕೊಂಡೆವು. ವಾಹಿನಿ ಸ್ಪೋರ್ಟ್ಸ್ ಕ್ಲಬ್ ನಿಮ್ಮ ಹಿತಕ್ಕಾಗಿ ತರಭೇತಿ ನೀಡುತ್ತಿದೆ. ಈ ತರಭೇತಿಯನ್ನು ಸದ್ಬಳಕೆ ಮಾಡಿಕೊಂಡು ಕ್ರೀಡೆಯಲ್ಲಿ‌ ಸಾಧನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.

ಇದೇ ವೇಳೆ ಉಪಸ್ಥಿತರಿದ್ದ ಇಸಾಫಾ ಫೈನಾನ್ಸ್ ಬ್ಯಾಂಕಿನ‌ ವಲಯ ವ್ಯವಸ್ಥಾಪಕರಾದ ಹೇಮು ಕುಮಾರ್ ಮಾತನಾಡಿ, ಕ್ರೀಡಾಪಟುಗಳ ಉತ್ತೇಜನಕ್ಕಾಗಿ ನಮ್ಮ ಬ್ಯಾಂಕ್ ಸದಾ ನಿಮ್ಮೊಂದಿಗಿರಲಿದೆ. ನಿಮ್ಮ ಜೊತೆ ಕ್ರೀಡಾ ಪಟುಗಳು‌ ಹಾಗೂ ಕ್ರೀಡಾ ಉತ್ಸಾಹಿಗಳು ಜೊತೆಗಿರುವುದು ಸಂತಸದ ಸಂಗತಿ. ಇದೀಗ ನಿಮ್ಮ ಜೊತೆ ನಮ್ಮ ಇಸಾಫಾ ಬ್ಯಾಂಕ್ ಸಹ ಇರಲಿದೆ. ಕ್ರೀಡಾ ತರಭೇತಿ‌ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳಲ್ಲಿ‌ ನಮ್ಮ ಬ್ಯಾಂಕ್ ಕೂಡಾ ನಿಮ್ಮೊಂದಿಗಿರಲದೆ ಎಂದು ಭರವಸೆ ನೀಡಿದರು.
ಪಟ್ಟಣದ ಶಾಖಾ ವ್ಯವಸ್ಥಾಪಕ ಮಂಜು ಪ್ರಸಾದ್, ಆಂದೋಲನ ಪತ್ರಿಕೆ ವರದಿಗಾರರಾದ ಕುಮಾರ್, ದೈಹಿಕ ಶಿಕ್ಷಕ ಕೃಷ್ಣೇಗೌಡ,‌ ತರಭೇತುದಾರ ರಾಹುಲ್, ಕ್ಲಬ್ ನ ನಿರ್ದೇಶಕ ಅಲ್ಲಾಪಟ್ಟಣ ಸತೀಶ್ ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಕೋರಿದರು.