ಕ್ರಿಕೆಟ್ ಆಡಲು ರಿಷಭ್ ಪಂತ್ ಫಿಟ್
01:56 PM Mar 12, 2024 IST | Samyukta Karnataka
ಬೆಂಗಳೂರು: ಕ್ರಿಕೆಟ್ ಆಡಲು ರಿಷಭ್ ಪಂತ್ ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ಅಧಿಕೃತ ಪ್ರಕಟನೆ ಮೂಲಕ ಪಂತ್ ಫಿಟ್ನೆಸ್ ವರದಿಯನ್ನು ಪ್ರಕಟಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಸಿಸಿಐ ಫಿಟ್ನೆಸ್ ಪಾಸ್ ಆದ ಕಾರಣ ಪಂತ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜತೆಗೆ ವಿಕೆಟ್ ಕೀಪಿಂಗ್ ಕೂಡ ನಡೆಸಲಿದ್ದಾರೆ. ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಟೂರ್ನಿಯಿಂದ ಹೊರಗುಳಿದಿದ್ದಾರೆ. 14-ತಿಂಗಳ ಪುನರ್ವಸತಿ ಮತ್ತು ಚೇತರಿಕೆಯ ಪ್ರಕ್ರಿಯೆಗೆ ಒಳಗಾದ ನಂತರ ಪಂತ್ ಅವರು ಕ್ರಿಕೆಟ್ಗೆ ಮರಳುತ್ತಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಪಂತ್ ಫಿಟ್ ಎಂದು ಬಿಸಿಸಿಐ ಘೋಷಿಸಿದೆ.