ಪರ್ರಿ ಸಿಕ್ಸರ್ಗೆ ಕಾರಿನ ಗಾಜು ಪುಡಿಪುಡಿ
11:25 PM Mar 05, 2024 IST | Samyukta Karnataka
ಬೆಂಗಳೂರು: ಇಲ್ಲಿನ ಎಂ.ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ೧೧ನೇ ಪಂದ್ಯದಲ್ಲಿ ಆರ್ಸಿಯ ಬ್ಯಾಟರ್, ಆಸ್ಟ್ರೇಲಿಯಾದ ಎಲ್ಲಿಸ್ ಪರ್ರಿ ಅವರು ಬಾರಿಸಿದ ಭರ್ಜರಿ ಸಿಕ್ಸರ್ ಹೊಡೆತಕ್ಕೆ ಕಾರಿನ ಕಿಟಕಿ ಗಾಜು ಪುಡಿಪುಡಿಯಾಗಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಗೆ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ. ಈ ಬಾರಿ ಟಾಟಾ ಪಂಚ್ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುವುದು. ಹೀಗಾಗಿ ಈ ಕಂಪೆನಿಯ ಕಾರನ್ನು ಪ್ರದರ್ಶನವಾಗಿ ಪ್ರತಿ ಪಂದ್ಯದಲ್ಲಿಯೂ ಇರಿಸಲಾಗುತ್ತದೆ. ಎಲ್ಲಿಸ್ ಪರ್ರಿ ಬಾರಿಸಿದ ಸಿಕ್ಸರ್ ನೇರವಾಗಿ ಕಾರಿನ ಕಿಟಕಿ ಗಾಜಿಗೆ ಬಿದ್ದಿದೆ. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿಪುಡಿಯಾಗಿದೆ. ಯುಪಿ ವಾರಿಯರ್ಸ್ನ ದೀಪ್ತಿ ಶರ್ಮ ಎಸೆದ ೧೯ನೇ ಓವರ್ನ ೫ನೇ ಎಸೆತದಲ್ಲಿ ಎಲ್ಲಿಸ್ ಪರ್ರಿ ಈ ಸಿಕ್ಸರ್ ಬಾರಿಸಿದರು. ಈ ಪಂದ್ಯದಲ್ಲಿ ಆರ್ಸಿಬಿ ೨೩ ರನ್ಗಳಿಂದ ಗೆಲುವು ಸಾಧಿಸಿತು.