For the best experience, open
https://m.samyuktakarnataka.in
on your mobile browser.

ಖೋ ಖೋ ಪಂದ್ಯಾವಳಿಯಲ್ಲಿ ಮೋಸದಾಟ!

03:53 PM Sep 27, 2024 IST | Samyukta Karnataka
ಖೋ ಖೋ ಪಂದ್ಯಾವಳಿಯಲ್ಲಿ ಮೋಸದಾಟ

ಕೊಪ್ಪಳ: ಪದವಿ ಕಾಲೇಜು ವಿದ್ಯಾರ್ಥಿಗಳ ಖೋ ಖೋ ಫೈನಲ್ ಪಂದ್ಯದಲ್ಲಿ ಗವಿಸಿದ್ಧೇಶ್ವರ ಕಾಲೇಜಿನಿಂದ ಹೊರಗಿನ ವ್ಯಕ್ತಿಯನ್ನು ಆಟವಾಡಿಸಿ, ಮೋಸದ ಆಟ ಆಡಿದ್ದಾರೆ ಎಂದು ಆರೋಪಿಸಿದ್ದು, ಇದರಿಂದಾಗಿ ಗೊಂದಲ ಉಂಟಾಗಿ, ಆಟವು ಸ್ಥಗಿತವಾಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಪದವಿ ಕಾಲೇಜುಗಳ ಕ್ರೀಡಾಕೂಟದ ವೇಳೆ ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಗವಿಸಿದ್ಧೇಶ್ವರ ಕಾಲೇಜು ನಡುವಿನ ಖೋ ಖೋ ಪಂದ್ಯವಳಿಯು ಗೊಂದಲ ಏರ್ಪಟ್ಟಿತ್ತು.

ಖೋ ಖೋ ಪಂದ್ಯವಾಡುವಾಗ ಕ್ರೀಡಾಪಟುಗಳನ್ನು ಬದಲು ಮಾಡುವಾಗ ಹೊರಗಿನ ವ್ಯಕ್ತಿಯೊಬ್ಬ ಬಂದು ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಆಟವಾಡಿದ್ದು, ಇದೇ ವ್ಯಕ್ತಿಯೇ ಮೂವರನ್ನು ಔಟ್ ಮಾಡಿದ್ದಾನೆ. ನಂತರ ಹೊರ ನಡೆಯುವಾಗ ಹನುಮಸಾಗರ ಶಿಕ್ಷಕರು ಗುರುತಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದರು‌‌‌. ಕೊನೆಗೆ ವ್ಯಕ್ತಿಗೆ ಬೈದಿದ್ದು, ಹೊರ ವ್ಯಕ್ತಿಯು ಪರಾರಿಯಾಗಿದ್ದಾನೆ.

ಹೊಸದಾಗಿ ಪಂದ್ಯ ಆಡಿಸಬೇಕು ಎನ್ನುವುದು ಹನುಮಸಾಗರ ಶಿಕ್ಷಕರ ಒತ್ತಾಯವಾಗಿದೆ. ಆಯೋಜಕರಿಂದಲೇ ಈ ರೀತಿಯಾಗಿ ಮೋಸದ ಆಟ ಆಡಿವುದಕ್ಕೆ ಹನುಮಸಾಗರದವರು ಮತ್ತು ಕ್ರೀಡಾಸಕ್ತರು ಬೇಸರ ವ್ಯಕ್ತಪಡಿಸಿದರು.

Tags :