ಗಂಡನೊಂದಿಗೆ ಜಗಳವಾಡಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಹೆಂಡತಿ
04:32 PM Nov 03, 2024 IST | Samyukta Karnataka
ಭೋಪಾಲ್: ಗಂಡನ ಜೊತೆ ಜಗಳವಾಡಿದ ಪತ್ನಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಘಟನೆ ಬರೌನಿ ಎಕ್ಸ್ಪ್ರೆಸ್ನಲ್ಲಿ ರೈಲಿನಲ್ಲಿ ನಡೆದಿದೆ.
ಮಧ್ಯಪ್ರದೇಶದ ಬರೌನಿ ಹಾಗೂ ಗುಜರಾತ್ನ ಅಹಮದಾಬಾದ್ ಮಧ್ಯೆ ಸಂಚರಿಸುತ್ತಿದ್ದ ರೈಲಿನಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಬಾಗಿಲ ಬಳಿ ನಿಂತಿದ್ದ ಮಹಿಳೆ ಇದ್ದಕ್ಕಿಂದ್ದಂತೆ ರೈಲಿನಿಂದ ಕೆಳಗೆ ಹಾರಿದ್ದಾಳೆ. ಆದರೆ ಮಹಿಳೆ ಬದುಕಿದ್ದಾಳ ಇಲ್ಲವಾ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಸದ್ಯ ಈ ಕುರಿತಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.