ಗಜೇಂದ್ರಗಡ ಮುಖ್ಯ ಶಿಕ್ಷಕಿ ಭೀಕರ ಹತ್ಯೆ
02:03 PM Dec 21, 2024 IST
|
Samyukta Karnataka
ಗದಗ: ಮುಖ್ಯ ಶಿಕ್ಷಕಿಯನ್ನು ರೊಟ್ಟಿ ಮಾಡುವ ಕಟ್ಟಿಗೆಯ ಕ್ವಾಮಣಗಿಯಿಂದ ಹೊಡೆದು ಭೀಕರ ಕೊಲೆ ಮಾಡಿದ ಘಟನೆ ನಡೆದಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನವನಗರದ ಅನ್ನಪೂರ್ಣ ರಾಠೋಡ್ (55) ಮೃತ ಮುಖ್ಯ ಶಿಕ್ಷಕಿಯಾಗಿದ್ದಾರೆ, ಗಜೇಂದ್ರಗಡ ತಾಲೂಕಿನ ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆಯಲ್ಲಿದ್ದ ಮುಖ್ಯ ಶಿಕ್ಷಕಿಯ ತಲೆಗೆ ದುಷ್ಕರ್ಮಿಗಳು ರೊಟ್ಟಿ ಮಾಡುವ ಕಟ್ಟಿಗೆಯ ಕ್ವಾಮಣಗಿಯಿಂದ ಹೊಡೆದು ಭೀಕರ ಕೊಲೆ ಮಾಡಿದ್ದು, ಇದರಿಂದಾಗಿ ಕ್ವಾಮಣಗಿ ತುಂಡು ತುಂಡಾಗಿ ಬಿದ್ದಿದೆ. ಇನ್ನೂ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.