ಗಣರಾಜೋತ್ಸವ ವೀಕ್ಷಣೆ: ವೆಂಕಪ್ಪ ಸುಗತೇಕರಗೆ ಬುಲಾವ್
03:12 PM Jan 14, 2025 IST
|
Samyukta Karnataka
ಬಾಗಲಕೋಟೆ : ನಗರದ ಗೋಂಧಳಿ ಕಲಾವಿದ ಡಾ.ವೆಂಕಪ್ಪ ಸುಗತೇಕರ ಅವರಿಗೆ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಆಹ್ವಾನ ಬಂದಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಗೋಂಧಳಿ ಕಲಾವಿದ ಅಂಬಾಜಿ ಹೆಸರು ಪ್ರಸ್ತಾಪಿಸಿದ್ದರು.
ಇದೀಗ ಅಂಬಾಜಿ ಅವರನ್ನು ಪರೇಡ್ ವೀಕ್ಷಣೆಗೆ ಅತಿಥಿಯಾಗಿ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಪರೇಡ್ ವೀಕ್ಷಿಸಲು ನಾನಾ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಲಾಗುತ್ತದೆ. ಕಳೆದ ೬೭ ವರ್ಷಗಳಿಂದ ಗೋಂಧಳಿ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಬಾಜಿ ಅವರು ಈ ಬಾರಿ ಗಣರಾಜ್ಯೋತ್ಸವಕ್ಕೆ ಆಹ್ವಾನಿತ ಕಲಾವಿದರ ಪೈಕಿ ಒಬ್ಬರಾಗಿದ್ದಾರೆ.
Next Article