ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗಣಿ ನಾಡಿನಲ್ಲಿ ಮತ್ತೆ ತಗುಲಿದ ಕೊರೊನಾ

05:14 PM Dec 22, 2023 IST | Samyukta Karnataka

ಸಂಡೂರು: ಪಟ್ಟಣದ ತೋರಣಗಲ್ಲಿನ ವಿದ್ಯಾನಗರದಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆ ವ್ಯಾಪ್ತಿಯಲ್ಲಿನ ವಿದ್ಯಾನಗರದಲ್ಲಿ ಮೂರು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷ ಕಾರ್ಮಿಕರಿದ್ದು, ಈ ಎಲ್ಲ ಸೋಂಕಿತರು ರಾಷ್ಟ್ರದ ಉತ್ತರ ಭಾಗದ ರಾಜ್ಯಗಳಿಂದ ಕೂಲಿಗಾಗಿ ಇಲ್ಲಿಗೆ ವಲಸೆ ಬಂದಿರುತ್ತಾರೆ.
ಈಗಾಗಲೇ ಅವರಿಗೆ ಹೋಂ ಐಸೋಲೇಶನ್ ಮಾಡಲಾಗಿದ್ದು ಸೂಕ್ತ ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಭರತ್ ತಿಳಿಸಿದ್ದಾರೆ.
ಕಳೆದ ಬಾರಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇದೇ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಂಡುಬಂದಿದ್ದವು. ಆರೋಗ್ಯ ಇಲಾಖೆ ಅವರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸುತ್ತಿದೆ. ಅವರ ಸಂಪರ್ಕದಲ್ಲಿ ಇರುವವರಿಗೆ ಸೂಚನೆ ನೀಡಿದ್ದಾರೆ.

Next Article